ಅಥಣಿ: ಕೆಲವರು ರಾಜಕೀಯ ಹಿತಾಸಕ್ತಿಗಾಗಿ ತಳವಾರ ಸಮುದಾಯ ಮುಗ್ಧ ಜನರನ್ನು ದುರುಪಯೋಗ ಮಾಡಿಕೊಂಡು ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಪ್ರತಿಭಟನೆ ನಡೆಸಲಾಗಿದೆ ಎಂದು ತಳವಾರ ಸಮುದಾಯದ ತಾಲೂಕು ಅಧ್ಯಕ್ಷ ಹನುಮಂತ ಆರೋಪಿಸಿದರು.
ಕೆಲವರಿಂದ ತಳವಾರ ಸಮಾಜದ ಜನರ ದುರುಪಯೋಗ: ಹನುಮಂತ ಕಾಲುವೆ - ತಳವಾರ ಸಮಾಜದ ಜನರ ದುರುಪಯೋಗ
ಕೆಲವು ರಾಜಕೀಯ ವ್ಯಕ್ತಿಗಳು ತಳವಾರ ಸಮಾಜದ ಜನರನ್ನು ದುರುಪಯೋಗ ಮಾಡಿಕೊಂಡು ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಅದಕ್ಕೂ ತಳವಾರ ಸಮುದಾಯಕ್ಕೂ ಯಾವುದೇ ಸಂಬಂಧವಿಲ್ಲ ಎಂದು ತಳವಾರ ಸಮಾಜದ ಅಧ್ಯಕ್ಷ ಹನುಮಂತ ಕಾಲುವೆ ಹೇಳಿದ್ದಾರೆ.
ಕೆಲವರಿಂದ ತಳವಾರ ಸಮಾಜದ ಜನರ ದುರುಪಯೋಗ ಆರೋಪ
ಈ ಬಗ್ಗೆ ಮಾತನಾಡಿರುವ ಅವರು, ಕಳೆದ 5ರಂದು ಕೆಲವು ತಳವಾರ ಸಮಾಜದ ಜನರನ್ನು ರಾಜು ಜಮಖಂಡಿಕರ ಮುಂದಾಳತ್ವದಲ್ಲಿ ಅಥಣಿ ತಹಶೀಲ್ದಾರ್ ಕಚೇರಿ ಎದುರು ಡಿಸಿಎಂ ಲಕ್ಷ್ಮಣ್ ಸವದಿ ವಿರುದ್ಧ ಪ್ರತಿಭಟನೆ ನಡೆಸಿ ರಾಜೀನಾಮೆಗೆ ಒತ್ತಾಯಿಸಿದ್ದರು. ತಮ್ಮ ರಾಜಕೀಯ ಮುಂದಾಲೋಚನೆ ಹಾಗೂ ಷಡ್ಯಂತ್ರದಿಂದ ಮುಗ್ಧ ತಳವಾರ ಸಮುದಾಯದ ಬಾಂಧವರನ್ನು ಕರೆದುಕೊಂಡು ಹೋಗಿ ಪ್ರತಿಭಟನೆ ನಡೆಸಿದ್ದಾರೆ. ನಮ್ಮ ಸಮಾಜಕ್ಕೂ ಆ ಪ್ರತಿಭಟನೆಗೂ ಸಂಬಂಧವಿಲ್ಲ ಎಂದು ತಳವಾರ ಸಮುದಾಯದ ತಾಲೂಕು ಅಧ್ಯಕ್ಷ ಹೇಳಿದರು.