ಬೆಳಗಾವಿ:ಜಿಲ್ಲೆಯ ಗೋಕಾಕ್ ನಗರದ ವಾಲ್ಮೀಕಿ ಕ್ರೀಡಾಂಗಣ ಪಕ್ಕದಲ್ಲಿರುವ ಸರ್ಕಾರಿ ಪ್ರೌಢ ಶಾಲೆಯಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಬರೆಯುತ್ತಿದ್ದ ವಿದ್ಯಾರ್ಥಿಗಳಿಗೆ ಪುಂಡರು ಕಾಂಪೌಂಡ್ ಹಾರಿ ಕಾಪಿ ಚೀಟಿ ಕೊಡಲು ಯತ್ನಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಂಪೌಂಡ್ ಹಾರಿ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಡಲು ಯತ್ನ: ಖಾಕಿ ಕಂಡು ಕಾಲ್ಕಿತ್ತ ಪುಂಡರು! - ಕರ್ನಾಟಕ ಎಸ್ಸೆಸ್ಸೆಲ್ಸಿ ಪರೀಕ್ಷೆ
ಪರೀಕ್ಷಾ ಕೇಂದ್ರ ಪಕ್ಕದ ಕಟ್ಟಡದ ಕಾಂಪೌಂಡ್ ಹಾರಿ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಗೆ ಕಾಪಿ ಚೀಟಿ ಕೊಡಲು ಯತ್ನಿಸಿದ ಪುಂಡರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾಂಪೌಂಡ್ ಹಾರಿದ ಯುವಕರು
ಪರೀಕ್ಷಾ ಕೇಂದ್ರದ ಕಾಂಪೌಂಡ್ ಹಾಗೂ ಕೇಂದ್ರದ ಪಕ್ಕದ ಕಟ್ಟಡದ ಮೇಲೇರಿ ಕಾಪಿ ಚೀಟಿ ಕೊಡಲು ಕೆಲ ಯುವಕರು ಯತ್ನಿಸಿದ್ದಾರೆ. ಅದನ್ನು ನೋಡಿದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಖಾಕಿ ಕಂಡು ಪುಂಡರು ಅಲ್ಲಿಂದ ಕಾಲ್ಕಿತ್ತಿದ್ದಾರೆ.
Last Updated : Jun 27, 2020, 12:23 PM IST