ಚಿಕ್ಕೋಡಿ :ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ಮಳೆ ಬೀಳುವ ಪ್ರಮಾಣ ಕಡಿಮೆಯಾಗಿದ್ದು, ಮುಳುಗಡೆ ಆಗಿದ್ದ 6 ಸೇತುವೆಗಳ ಪೈಕಿ 3 ಸೇತುವೆಗಳು ಸಂಚಾರ ಮುಕ್ತವಾಗಿವೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ತಗ್ಗಿದ ಮಳೆ.. 3 ಸೇತುವೆಗಳು ಸಂಚಾರಕ್ಕೆ ಮುಕ್ತ.. - Kannada news paper
ಕಲ್ಲೋಳ-ಯಡೂರು, ಜತ್ರಾಟ-ಭೀವಶಿ ಹಾಗೂ ಮಲಿಕವಾಡ-ದತ್ತವಾಡ ಸೇತುವೆಗಳ ಜಲಾವೃತ ಸ್ಥಿತಿಯಲ್ಲಿವೆ. ವಾಹನ ಸವಾರರು ಪರ್ಯಾಯ ಮಾರ್ಗದಿಂದ ಸಂಚಾರ ಮಾಡುತ್ತಿದ್ದಾರೆ.
ಮಹಾರಾಷ್ಟ್ರದ ಘಟ್ಟ ಪ್ರದೇಶಗಳಲ್ಲಿ ತಗ್ಗಿದ ಮಳೆ
ಕೃಷ್ಣಾ, ವೇದಗಂಗಾ ಹಾಗೂ ದೂಧಗಂಗಾ ನದಿ ನೀರಿನ ಒಳ ಹರಿವಿನಲ್ಲಿ ಇಳಿಕೆಯಾಗಿದ್ದು, ಭೋಜವಾಡಿ-ಕುನ್ನೂರು, ಸಿದ್ನಾಳ-ಅಕ್ಕೋಳ ಗ್ರಾಮಗಳ ಕಾರದಗಾ, ಭೋಜ ಸೇತುವೆಗಳು ಸಂಚಾರ ಮುಕ್ತವಾಗಿವೆ.
ಕಲ್ಲೋಳ-ಯಡೂರು, ಜತ್ರಾಟ-ಭೀವಶಿ ಹಾಗೂ ಮಲಿಕವಾಡ-ದತ್ತವಾಡ ಸೇತುವೆಗಳ ಜಲಾವೃತ ಸ್ಥಿತಿಯಲ್ಲಿವೆ. ವಾಹನ ಸವಾರರು ಪರ್ಯಾಯ ಮಾರ್ಗದಿಂದ ಸಂಚಾರ ಮಾಡುತ್ತಿದ್ದಾರೆ. ಸದ್ಯ ಕೃಷ್ಣಾ ನದಿಗೆ 80,000 ಕ್ಯೂಸೆಕ್‌ಗಿಂತ ಹೆಚ್ಚು ಒಳ ಹರಿವು ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.