ಕರ್ನಾಟಕ

karnataka

ETV Bharat / state

ಮತ್ತೆ ನೋಟ್​ ಬ್ಯಾನ್​ ಮಾಡಿ, ಸಾರಾಯಿ ನಿಷೇಧ ಮಾಡೋ ಯಪ್ಪಾ ಪರಮಾತ್ಮ: ರೈತನ ಮನವಿ - Belagavi

ಪ್ರಧಾನಿ ನರೇಂದ್ರ ಮೋದಿಯವರು ಕರ್ನಾಟಕ ರೈತರ ಸಮಸ್ಯೆಗಳತ್ತ ಗಮನ ಹರಿಸುವಂತೆ ರೈತನೊಬ್ಬ ಪರಿ ಪರಿಯಾಗಿ ಬೇಡಿಕೊಂಡಿದ್ದಾನೆ. ನಾನು ಮೋದಿ ಅಭಿಮಾನಿ ಎಂದು ಹೇಳಿಕೊಂಡಿರುವ ಈ ರೈತ, ನಿಮ್ಮ ಕಠಿಣ ನಿರ್ಧಾರಗಳು ಮತ್ತಷ್ಟು ಗಟ್ಟಿಯಾಗಿರಲಿ ಎಂದಿದ್ದಾರೆ.

ಮೋದಿ ಅಭಿಮಾನಿ

By

Published : Jun 25, 2019, 9:16 PM IST

Updated : Jun 25, 2019, 9:22 PM IST

ಬೆಳಗಾವಿ: ಈ ವ್ಯಕ್ತಿ ಪಕ್ಕಾ ಮೋದಿ ಅಭಿಮಾನಿ. ಮೈ ಮೇಲಿನ ಬಟ್ಟೆ ಕೂಡ ಮೋದಿ ಚಿತ್ರದಿಂದ ತುಂಬಿ ಹೋಗಿದೆ. ಕರ್ನಾಟಕ ರೈತರ ಸಮಸ್ಯೆಗೆ ಪರಿಹಾರ ಹಾಗೂ ಸಾರಾಯಿ ನಿಷೇಧ ಮಾಡುವಂತೆ ಪ್ರಧಾನಿ ಮೋದಿಯವರನ್ನು ಪರಿ ಪರಿಯಾಗಿ ಬೇಡಿಕೊಂಡಿದ್ದಾರೆ.

ಗೋಕಾಕ್ ತಾಲೂಕಿನ ನಾರಾಯಣ ಚಿನಾಳ ಎಂಬುವರೇ ಮೋದಿ ಅವರಲ್ಲಿ ಬೇಡಿಕೊಂಡ ರೈತ. ರೈತರು ಅನುಭವಿಸುತ್ತಿರುವ ಕಷ್ಟಗಳಿಗೆ ಈ ಸರ್ಕಾರದಿಂದ ಯಾವುದೇ ಪರಿಹಾರ ನೀಡುತ್ತಿಲ್ಲ. ಆದ್ದರಿಂದ ಪ್ರಧಾನಿ ಮೋದಿಯವರು ಕರ್ನಾಟಕ ರೈತರ ಸಮಸ್ಯೆಗಳಿಗೆ ಪರಿಹಾರ ನೀಡಬೇಕು. ಜೊತೆಗೆ ಸಾರಾಯಿ ನಿಷೇಧ ಮಾಡಿ ಬಡವರ ಬದುಕು ಸ್ವಚ್ಛ ಮಾಡಬೇಕು ಎಂದು ಕೇಳಿಕೊಂಡಿದ್ದಾರೆ.

ರೈತರ ಸಮಸ್ಯೆ ಪರಿಹಾರ ಮಾಡುವಂತೆ ಪ್ರಧಾನಿ ಮೋದಿಗೆ ಮನವಿ

ನೋಟು ಬ್ಯಾನ್ ಮಾಡಿ ಅನೇಕ ಶ್ರೀಮಂತರ ನಿದ್ದೆಗೆಡಿಸಿರುವ ಮೋದಿಯವರೇ ಮತ್ತೊಮ್ಮೆ ನೋಟು ಬ್ಯಾನ್​ ಮಾಡಿ. ಸಾಲ ನೀಡಿದ ಬ್ಯಾಂಕುಗಳು ರೈತರನ್ನು ಬದುಕಲು ಬಿಡುತ್ತಿಲ್ಲ. ದಯಮಾಡಿ ಸಮಸ್ಯೆ ಬಗೆಹರಿಸಿ. ಜೊತೆಗೆ ಭ್ರಷ್ಟಾಚಾರದ ವಿರುದ್ಧ ನಿಮ್ಮ ಕಠಿಣ ನಿರ್ಧಾಗಳು ಮತ್ತಷ್ಟು ಗಟ್ಟಿಯಾಗಿರಲಿ ಎಂದು ನಾರಾಯಣ, ಪ್ರಧಾನಿ ಮೋದಿಯವರಲ್ಲಿ ಬೇಡಿಕೊಂಡಿದ್ದಾನೆ.

Last Updated : Jun 25, 2019, 9:22 PM IST

ABOUT THE AUTHOR

...view details