ಚಿಕ್ಕೋಡಿ(ಬೆಳಗಾವಿ):ದುಡಿಯುವ ಕೈಗಳಿಗೆ ಸಹಾಯವಾಗಲಿ ಎಂದು ಸರ್ಕಾರ ಸಹಾಯಧನ ಘೋಷಣೆ ಮಾಡಿದ್ದು, ಕಾರ್ಮಿಕರು ಹಣ ಪಡೆಯಬೇಕಾದರೆ ನೋಂದಾಯಿತ ಸರ್ಟಿಫಿಕೇಟ್ ಕೇಳಲಾಗುತ್ತಿದೆ. ಆದರೆ ಅದು ಅಸಾಧ್ಯವೆಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಹೇಳಿದ್ದಾರೆ.
ಆಧಾರ್ ಕಾರ್ಡ್ ದಾಖಲೆಯ ಅನುಸಾರ ಸಹಾಯಧನ ನೀಡಿ: ಚಂದ್ರಕಾಂತ ಹುಕ್ಕೇರಿ - ಆಧಾರ್ ಅನುಸಾರ ಸಹಾಯ ಧನ
ರಾಜ್ಯದ ಎಲ್ಲಾ ನಾಗರಿಕರಿಗೂ ಆಧಾರ್ ಕಾರ್ಡ್ಗಳ ದಾಖಲೆಯ ಅನುಸಾರ ಸಹಾಯಧನವನ್ನ ಬಿಡುಗಡೆ ಮಾಡಬೇಕೆಂದು ಸಮಾಜ ಸೇವಕ ಚಂದ್ರಕಾಂತ ಹುಕ್ಕೇರಿ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಮಾಧ್ಯಮದವರ ಜೊತೆ ಮಾತನಾಡಿದ ಅವರು, ಕ್ಷೌರಿಕ, ಕೂಲಿಕಾರ, ನೇಕಾರ, ಅಗಸ ಹೀಗೆ ಹಲವಾರು ಸಮೂಹಗಳಿಗೆ ಸರ್ಕಾರ ಸಹಾಯಧನ ಘೋಷಣೆ ಮಾಡಿದೆ. ಎಲ್ಲರಿಗೂ ನೋಂದಾಯಿತ ದಾಖಲೆಗಳನ್ನ ಕೇಳುತ್ತಿದ್ದಾರೆ. ಈ ಎಲ್ಲಾ ಸಮೂಹದವರು ದುಡಿಯುವ ವರ್ಗದವರಾಗಿದ್ದು, ಇವರಲ್ಲಿ ನೋಂದಣಿ ಪಡೆದವರು ಸಿಗುವುದು ತುಂಬಾ ಕಷ್ಟಕರವಾಗಿದೆ.
ಬಡಿಗೇರ, ಕುಂಬಾರ, ಕಂಬಾರ ಹೀಗೆ ಇನ್ನೂ ಹಲವಾರು ಸಮೂಹಗಳು ಸಹ ಈ ಕೊರೊನಾ ಮಹಾಮಾರಿಗೆ ಸಿಕ್ಕು ತುಂಬಾ ಕಷ್ಟದಲ್ಲಿವೆ. ಇಂತಹ ಹಲವಾರು ಬಡ ಕುಟುಂಬಗಳ ಬಗ್ಗೆ ಸರ್ಕಾರ ಯೋಜನೆ ರೂಪಿಸಿಲ್ಲ. ದಯವಿಟ್ಟು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ರಾಜ್ಯದ ಎಲ್ಲಾ ನಾಗರಿಕರಿಗೂ ಆಧಾರ್ ಕಾರ್ಡ್ಗಳ ದಾಖಲೆಯ ಅನುಸಾರ ಸಹಾಯಧನವನ್ನ ಆಯಾ ತಾಲೂಕುಗಳ ತಹಶೀಲ್ದಾರ್ರ ಮುಖಾಂತರ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.