ಕರ್ನಾಟಕ

karnataka

ETV Bharat / state

ಬೆಳಗಾವಿ: ಮಾಸ್ಕ್‌, ಸಾಮಾಜಿಕ ಅಂತರ ನಿರ್ಲಕ್ಷಿಸಿ ಬಸ್‌ನಲ್ಲಿ ಪ್ರಯಾಣ - Belgaum latest news

ಕೊರೊನಾ ಆರ್ಭಟಕ್ಕೆ ಜಗತ್ತು ತತ್ತರಿಸಿದೆ. ಇನ್ನೊಂದೆಡೆ, ಇದಕ್ಕೂ ನಮಗೂ ಯಾವುದೇ ಸಂಬಂಧವೇ ಇಲ್ಲವೇನೋ? ಎಂಬಂತೆ ಬೆಳಗಾವಿಯ ಜನ ಸಾಮಾಜಿಕ ಅಂತರವನ್ನು ಗಾಳಿಗೆ ತೂರಿ ಬಸ್​​ನಲ್ಲಿ ಕಿಕ್ಕಿರಿದು ಸಂಚರಿಸಿದರು.

Social distance violation while traveling by bus in Belgaum
ಕಿಕ್ಕಿರಿದು ಬಸ್​ ಸಂಚಾರ ಮಾಡಿದ ಬೆಳಗಾವಿ ಮಂದಿ...

By

Published : Jul 1, 2020, 1:53 PM IST

ಬೆಳಗಾವಿ: ಸಾರಿಗೆ ಸಚಿವ ಲಕ್ಷ್ಮಣ್​ ಸವದಿಯವರ ತವರು ಜಿಲ್ಲೆಯಲ್ಲಿ ಜನ ಲಾಕ್​ಡೌನ್​ ನಿಯಮಗಳನ್ನು ಉಲ್ಲಂಘಿಸಿ ಬಸ್​​ನಲ್ಲಿ ಕಿಕ್ಕಿರಿದು ಪ್ರಯಾಣಿಸಿದ್ದಾರೆ.

ಬೈಲಹೊಂಗಲ ತಾಲೂಕಿನಿಂದ ನಗರಕ್ಕೆ ಬರುವ ಸಾರಿಗೆ ಬಸ್‌ನಲ್ಲಿ ಅಂದಾಜು 70ಕ್ಕಿಂತಲೂ ಹೆಚ್ಚು ಜನರು ಪ್ರಯಾಣಿಸುತ್ತಿದ್ದರು. ಬೆಳಗ್ಗೆ ಹಾಗೂ ಸಂಜೆಯ ವೇಳೆ ಈ‌ ರೀತಿಯ ಸಂಚಾರ ಸಾಮಾನ್ಯವಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

ಮಾಸ್ಕ್‌, ಸಾಮಾಜಿಕ ಅಂತರ ಮರೆತು ಬೆಳಗಾವಿ ಮಂದಿಯ ಬಸ್ ಪ್ರಯಾಣ

ಲಾಕ್​ಡೌನ್​​ ಸಡಿಲಿಕೆಯ ನಂತರ ಸಾರಿಗೆ ಇಲಾಖೆ ಬಸ್‌ಗಳಲ್ಲಿ ಪ್ರಯಾಣಿಕರು ಮಾಸ್ಕ್‌ ಕಡ್ಡಾಯವಾಗಿ ಧರಿಸಬೇಕು. ಮೂವರು ಕೂರುವ ಸೀಟಿನಲ್ಲಿ ಇಬ್ಬರು, ಇಬ್ಬರು ಕೂರುವ ಸೀಟಿನಲ್ಲಿ ಒಬ್ಬರು ಕುಳಿತು ಪ್ರಯಾಣಿಸಬೇಕು ಎಂಬ ನಿಯಮವಿದೆ. ಈ ಬಸ್‌ ಸಂಚಾರದಲ್ಲಿ ಪ್ರಯಾಣಿಕರು ಈ ಎಲ್ಲಾ ನಿಯಮಗಳನ್ನು ಉಲ್ಲಂಘಿಸಿದ್ದು ಕಂಡುಬಂತು.

ABOUT THE AUTHOR

...view details