ಗಂಗಾವತಿ: ಬೈಕ್ನ ಪೆಟ್ರೋಲ್ ಟ್ಯಾಂಕ್ನಲ್ಲಿ ನಾಗರ ಹಾವು ಕಾಣಿಸಿಕೊಂಡಿದ್ದು, ಸ್ಥಳೀಯರ ಕಣ್ಣಿಗೆ ಬಿದ್ದ ಹಿನ್ನೆಲೆ ಮುಂದಾಗುತ್ತಿದ್ದ ಅನಾಹುತ ತಪ್ಪಿಸಲಾಗಿದೆ.
ಚಲಿಸುತ್ತಿದ್ದ ಬೈಕಿನಲ್ಲಿ ಕಾಣಿಸಿಕೊಂಡ ನಾಗರ ಹಾವು! ಬದುಕಲು ಬಿಡಲಿಲ್ಲ ಸ್ಥಳೀಯರು
ಪ್ರಶಾಂತ ನಗರದ ಯುವಕ ಅಭಿಜಿತ್ ಬೈಕ್ ಚಲಾಯಿಸಿಕೊಂಡು ಬಸ್ ನಿಲ್ದಾಣದತ್ತ ಹೊರಟಿದ್ದ. ಈ ವೇಳೆ ಬೈಕ್ನಲ್ಲಿ ಇದ್ದ ಹಾವನ್ನು ಪಕ್ಕದಲ್ಲಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರ ಗಮನಿಸಿದ್ದಾನೆ. ತದನಂತರ ಹಾವನ್ನು ರಕ್ಷಣೆ ಮಾಡುವ ಬದಲಾಗಿ ಕೊಲ್ಲಲಾಗಿದೆ.
ಪ್ರಶಾಂತ ನಗರದ ಯುವಕ ಅಭಿಜಿತ್ ಎಂಬುವವ ಬೈಕ್ ಚಲಾಯಿಸಿಕೊಂಡು ಬಸ್ ನಿಲ್ದಾಣದತ್ತ ಹೊರಟಿದ್ದ. ಈ ವೇಳೆ ಬೈಕ್ನಲ್ಲಿದ್ದ ಹಾವನ್ನು ಪಕ್ಕದಲ್ಲಿ ಸಂಚಾರ ಮಾಡುತ್ತಿದ್ದ ಬೈಕ್ ಸವಾರ ಗಮನಿಸಿದ್ದಾನೆ. ನಂತರ ಬೈಕ್ನಲ್ಲಿ ಹಾವಿದೆ ಎಂದು ಅಭಿಜಿತ್ಗೆ ಸವಾರ ಹೇಳಿದಾಗ ಅಭಿಜಿತ್ ತಕ್ಷಣವೇ ಬೈಕ್ನ್ನು ರಸ್ತೆ ಬದಿ ನಿಲ್ಲಿಸಿದ್ದಾನೆ.
ಬೈಕ್ ಪಾರ್ಕಿಂಗ್ ಮಾಡಿದ ನಂತರ ಅಲ್ಲಿದ್ದ ಹಾವನ್ನು ಸ್ಥಳೀಯರು ಹುಡುಕಿದರಾದರೂ ಸಿಗಲಿಲ್ಲವಾದ್ದರಿಂದ ಅಭಿಜಿತ್ ಬೈಕ್ ಏರಿ ಹೊರಟು ಹೋಗಿದ್ದಾನೆ. ಇದಾದ ನಂತರ ಅದೇ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದೆ. ಆದರೆ, ಆ ಹಾವನ್ನು ಸ್ಥಳೀಯರು ಬದುಕಲು ಬಿಡಲಿಲ್ಲ.