ಬೆಳಗಾವಿ: ನಗರದ ಮಿಲನ್ ಹೋಟೆಲ್‌ನಿಂದ ಹಿಂಡಲಗಾ ರಸ್ತೆಯ ಗಾಂಧೀಜಿ ಪುತ್ಥಳಿವರೆಗಿನ ಸ್ಮಾರ್ಟ್ ರಸ್ತೆ ಕಾಮಗಾರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು.
ಬೆಳಗಾವಿಯಲ್ಲಿ ಸ್ಮಾರ್ಟ್ ರಸ್ತೆ ಕಾಮಗಾರಿಗೆ ಕೇಂದ್ರ ಸಚಿವ ಸುರೇಶ್ ಅಂಗಡಿ ಚಾಲನೆ - ಸ್ಮಾರ್ಟ್ ರಸ್ತೆ ಕಾಮಗಾರಿ
ಬೆಳಗಾವಿ ನಗರದ ಹಿಂಡಲಗಾ ರಸ್ತೆಯಲ್ಲಿನ ಸ್ಮಾರ್ಟ್ ರಸ್ತೆ ಕಾಮಗಾರಿಗೆ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ್ ಅಂಗಡಿ ಚಾಲನೆ ನೀಡಿದರು.

ಸುರೇಶ್ ಅಂಗಡಿ ಚಾಲನೆ
15.4 ಕೋಟಿ ರೂ. ವೆಚ್ಚದ ಸ್ಮಾರ್ಟ್ ರಸ್ತೆ ಜೊತೆಗೆ ವೈಟ್ ಟಾಪಿಂಗ್ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಅವರು, ಗುಣಮಟ್ಟದ ಕಾಮಗಾರಿಯನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಹೋಟೆಲ್ ಮಿಲನನಿಂದ ಹರ್ಷಾ ಶೋರೂಮ್ ಮೂಲಕ ಹಿಂಡಲಗಾ ರಸ್ತೆಯಲ್ಲಿರುವ ಗಾಂಧೀಜಿ ಪುತ್ಥಳಿವರೆಗೆ ವೈಟ್ ಟಾಪಿಂಗ್, ಫುಟ್ ಪಾಥ್ ನಿರ್ಮಾಣ, ಬೀದಿ ದೀಪ ಅಳವಡಿಕೆ, ಸೈಕಲ್ ಟ್ರ್ಯಾಕ್ ನಿರ್ಮಾಣ ಮತ್ತು ಭೂಗತ ವಿದ್ಯುತ್ ವ್ಯವಸ್ಥೆಯನ್ನು ಈ ಕಾಮಗಾರಿ ಒಳಗೊಂಡಿದೆ.
TAGGED:
ಸ್ಮಾರ್ಟ್ ರಸ್ತೆ ಕಾಮಗಾರಿ