ಬೆಳಗಾವಿ:ಬೀದಿನಾಯಿಗಳ ಹಾವಳಿಗೆ ಆರು ಕುರಿಗಳು ಸಾವನ್ನಪ್ಪಿರುವ ಘಟನೆ ಇಲ್ಲಿನ ಶಿವಬಸವ ನಗರದಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ನರಸು ರಾಯಪ್ಪ ಕುಂಪಿ ಎಂಬುವರಿಗೆ ಸೇರಿದ ಕುರಿಗಳಿವು. ಸುಮಾರು 400 ಕುರಿಗಳನ್ನು ಮೇಯಿಸಲು ಹೋಗುತ್ತಿದ್ದಾಗ 20ಕ್ಕೂ ಹೆಚ್ಚು ಬೀದಿ ನಾಯಿಗಳು ದಾಳಿ ಮಾಡಿವೆ. ಕುರಿಗಾಹಿಗಳು ಎಷ್ಟೇ ಪ್ರಯತ್ನಪಟ್ಟರೂ ಕುರಿಗಳನ್ನು ಬಚಾವ್ ಮಾಡಲು ಸಾಧ್ಯವಾಗಲಿಲ್ಲ. ಕುರಿಗಾಹಿಗಳ ಮೇಲೂ ನಾಯಿಗಳು ದಾಳಿಗೆ ಮುಂದಾಗಿವೆ. ಆಗ ಸ್ಥಳೀಯರ ಸಹಕಾರ ಪಡೆದು ನಾಯಿಗಳನ್ನು ಓಡಿಸಲಾಗಿದೆ.