ಕರ್ನಾಟಕ

karnataka

ETV Bharat / state

ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಆರು ಸೇತುವೆ ಸಂಚಾರಕ್ಕೆ ಮುಕ್ತ - Chikkodi news

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮುಳುಗಡೆ ಹೊಂದಿದ್ದ 11 ಸೇತುವೆಗಳ ಪೈಕಿ ಆರು ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ.

Six bridges in the Chikodi subdivision
ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಆರು ಸೇತುವೆಗಳು ಸಂಚಾರಕ್ಕೆ ಮುಕ್ತ

By

Published : Aug 24, 2020, 10:00 PM IST

ಚಿಕ್ಕೋಡಿ:ಮಹಾರಾಷ್ಟ್ರದಲ್ಲಿ ತಗ್ಗಿದ ಮಳೆಯ ಪ್ರಭಾವದಿಂದಾಗಿ ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯಲ್ಲಿ ಮುಳುಗಡೆ ಹೊಂದಿದ್ದ 11 ಸೇತುವೆಗಳ ಪೈಕಿ ಆರು ಸೇತುವೆ ಸಂಚಾರಕ್ಕೆ ಮುಕ್ತವಾಗಿವೆ.

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ - ರಾಯಬಾಗ ಸೇತುವೆ ಹಾಗೂ ನಿಪ್ಪಾಣಿ ತಾಲೂಕಿನ ಸದಲಗಾ - ಬೋರಗಾಂವ, ದಾನವಾಡ - ಯಕ್ಸಂಬಾ, ಜತ್ರಾಟ - ಭೀವಶಿ, ಅಕ್ಕೋಳ - ಸಿದ್ದನಾಳ, ಭೋಜವಾಡಿ - ಕುನ್ನೂರ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.

ಮಹಾರಾಷ್ಟ್ರದಲ್ಲಿ ಹಾಗೂ ಚಿಕ್ಕೋಡಿ ಉಪವಿಭಾಗದಲ್ಲಿ ಮಳೆ ಕಡಿಮೆಯಾದ್ದರಿಂದ ನದಿ ನೀರಿನ ಪ್ರಮಾಣದಲ್ಲೂ ಸಹ ಭಾರಿ ಇಳಿಕೆಯಾಗಿದೆ. ಸದ್ಯ 1,25,000 ಕ್ಯೂಸೆಕ್‌ಕ್ಕಿಂತ ಹೆಚ್ಚು ಕೃಷ್ಣಾ ನದಿ ಒಳಹರಿವಿದೆ.

For All Latest Updates

ABOUT THE AUTHOR

...view details