ಕರ್ನಾಟಕ

karnataka

ETV Bharat / state

ಏಕ ವಲಯ ಪುರುಷ ಮತ್ತು ಮಹಿಳೆಯರ ಟೈಕ್ವಾಂಡೊ ಕರಾಟೆಗೆ ಚಾಲನೆ - ಬೆಳಗಾವಿ 2 ದಿನಗಳ ಕರಾಟೆ ಪಂದ್ಯಾವಳಿ

ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿ ಪಟ್ಟಣದ ಬಿ.ಶಂಕರಾನಂದ ಮಹಾವಿದ್ಯಾಲಯ ಇವರ ಸಂಯುಕ್ತಾಶ್ರಯದಲ್ಲಿ ನಡೆಯುತ್ತಿರುವ 2 ದಿನಗಳ ಕರಾಟೆ ಪಂದ್ಯಾವಳಿಯನ್ನು ಭಾರತೀಯ ಟೈಕ್ವಾಂಡೊ ತಂಡದ ತರಬೇತುದಾರ ಪರಪ್ಪಾ ಎಸ್.ಕೆ. ಉದ್ಘಾಟಿಸಿದರು.

Single-zone men and women taekwondo karate at Belgavi
ಏಕ ವಲಯ ಪುರುಷ ಮತ್ತು ಮಹಿಳೆಯರ ಟೈಕ್ವಾಂಡೊ ಕರಾಟೆಗೆ ಚಾಲನೆ

By

Published : Jan 31, 2020, 6:55 PM IST

ಚಿಕ್ಕೋಡಿ : ಏಕ ವಲಯ ಪುರುಷ ಮತ್ತು ಮಹಿಳೆಯರ ಟೈಕ್ವಾಂಡೊ ಕರಾಟೆ ಪಂದ್ಯಾವಳಿಗೆ ಭಾರತೀಯ ಟೈಕ್ವಾಂಡೊ ತಂಡದ ತರಬೇತುದಾರ ಪರಪ್ಪಾ ಎಸ್.ಕೆ ಚಾಲನೆ ನೀಡಿದರು.

ಏಕ ವಲಯ ಪುರುಷ ಮತ್ತು ಮಹಿಳೆಯರ ಟೈಕ್ವಾಂಡೊ ಕರಾಟೆಗೆ ಚಾಲನೆ

ಬಳಿಕ ಮಾತನಾಡಿದ ಅವರು, ಟೈಕ್ವಾಂಡೊ ಕ್ರೀಡೆ 1971ರಲ್ಲಿ ಕೊರಿಯಾದಲ್ಲಿ ಟೈಕ್ವಾಂಡೊ ಅಸೋಶಿಯೇಶನ್​ ಎಂಬ ಹೆಸರಿನಲ್ಲಿ ಪ್ರಾರಂಭವಾಗಿ ನಂತರ 1973ರಲ್ಲಿ ವರ್ಲ್ಡ್​ ಟೈಕ್ವಾಂಡೊ ಫೆಡರೇಶನ್​ ಆಗಿ ಜಗತ್ತಿನಾದ್ಯಂತ ಸುಮಾರು 198 ದೇಶಗಳಲ್ಲಿ ಪ್ರಚಲಿತಕ್ಕೆ ಬಂದು ಟೈಕ್ವಾಂಡೊ ಕ್ರೀಡೆಗೆ ಪ್ರಾಮುಖ್ಯತೆ ದೊರೆಯಿತು.

ಭಾರತಕ್ಕೆ ಟೈಕ್ವಾಂಡೊ ಪರಿಚಯಿಸಿದ ಕೀರ್ತಿ ಮಾಸ್ಟರ್ ಕೀಮ ಎಂಬುವರಿಗೆ ಸಲ್ಲುತ್ತದೆ. ಅವರು ಎನ್.ಐ.ಎಸ್ ಗುಣಮಟ್ಟದ ತರಬೇತುದಾರರಿಂದ 2004 ರಿಂದ 2006ರ ವರೆಗೆ ಪರಿಶ್ರಮ ವಹಿಸಿ 2004ರಲ್ಲಿ ಭಾರತಕ್ಕೆ ಏಶಿಯಾ ಗೇಮ್ಸ್​ ಮೆಡಲ್ ದೊರಕಿಸಿ ಕೊಡುವ ಮಹದಾಶೆ ಅವರದಾಗಿತ್ತು. ಟೈಕ್ವಾಂಡೊ ಒಂದು ಶಿಸ್ತಿನ ಆಟವಾಗಿದ್ದು ಗ್ರಾಮೀಣ ಭಾಗಕ್ಕೆ ಪರಿಚಯಿಸುತ್ತಿರುವುದು ಉತ್ತಮ ವಿಚಾರ, ಮಹಿಳೆಯ ಆತ್ಮರಕ್ಷೆಣೆಗಾಗಿ ಟೈಕ್ವಾಂಡೊ ಒಂದು ಉತ್ತಮ ಕ್ರೀಡೆಯಾಗಿದೆ ಎಂದರು.

ABOUT THE AUTHOR

...view details