ETV Bharat Karnataka

ಕರ್ನಾಟಕ

karnataka

ETV Bharat / state

ಸರ್ಕಾರದ ಮಾರ್ಗ ಸೂಚಿಯನ್ವಯ ಕುಂದಾನಗರಿಯಲ್ಲಿ ಸರಳ ಮೊಹರಂ ಆಚರಣೆ - moharam fest news

ಗಡಿ ಜಿಲ್ಲೆ ಬೆಳಗಾವಿಯಲ್ಲಿ ಕೊರೊನಾ ಹಿನ್ನೆಲೆ ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿ ಅನ್ವಯ ಹಬ್ಬವನ್ನು ಆಚರಿಸಲಾಯಿತು. ಮೆರವಣಿಗೆ, ಕುಣಿತ ರದ್ದುಗೊಳಿಸಲಾಗಿತ್ತು..

simple moharam in belgavi
ಕುಂದಾನಗರಿಯಲ್ಲಿ ಸರಳ ಮೊಹರಂ ಆಚರಣೆ
author img

By

Published : Aug 30, 2020, 5:17 PM IST

ಬೆಳಗಾವಿ : ಕೊರೊನಾ ವೈರಸ್ ಆತಂಕದ ನಡುವೆ ಕುಂದಾನಗರಿಯಲ್ಲಿ ಮೊಹರಂ ಹಬ್ಬವನ್ನು ಸರಳ, ಸಂಕ್ಷಿಪ್ತ ಹಾಗೂ ವಿದ್ಯುತ್ ದೀಪಾಲಂಕರವಾಗಿ ಆಚರಿಸಲಾಯಿತು.

ಕುಂದಾನಗರಿಯಲ್ಲಿ ಸರಳ ಮೊಹರಂ ಆಚರಣೆ

ಜಿಲ್ಲೆಯಾದ್ಯಂತ ಸರ್ಕಾರ ಹೊರಡಿಸಿರುವ ಮಾರ್ಗ ಸೂಚಿ ಅನ್ವಯ, ಮೆರವಣಿಗೆ, ತಾಬೂತ್ ಇಲ್ಲದೆಯೇ ಮುಸ್ಲಿಂ ಸಮಾಜದವರು ಇಂದು ಮೊಹರಂ ಹಬ್ಬ ಆಚರಿಸಿದರು. ಮೊಹರಂ ಹಬ್ಬವಾಗಿ ಪ್ರತಿವರ್ಷ ನಡೆಯುತ್ತಿದ್ದ ಬೆಳಗ್ಗಿನ ಮುಲಾಖಾತ್ ಕಾರ್ಯಕ್ರಮವನ್ನು ಈ ಬಾರಿ ಸರ್ಕಾರದ ನಿರ್ದೇಶನದಂತೆ ರದ್ದುಪಡಿಸಲಾಗಿದೆ.

ಅಲ್ಲಾಹು ದೇವರ ಸ್ವರೂಪ ಎಂದೇ ಮುಸ್ಲಿಮರು ಆರಾಧಿಸುವ ಪಾಂಜಾಗಳನ್ನು ಬೆಳಗ್ಗೆ ಪ್ರತಿಷ್ಠಾಪಿಸಿ, ಸಂಜೆ ಹೊತ್ತಿಗೆ ವಿಸರ್ಜಿಸಲು ಮುಸ್ಲಿಂ ಸಮುದಾಯ ತಯಾರಿ ಮಾಡಿಕೊಂಡಿದ್ದು, ಜತೆಗೆ ಮುಸ್ಲಿಂ ಸಮುದಾಯದವರು ಪ್ರತಿ ವರ್ಷ ನಡೆಸುತ್ತಿದ್ದ ಮೆರವಣಿಗೆ, ತಾಬೂತ್ ಈ ಬಾರಿ ರದ್ದುಗೊಳಿಸಿದ್ದಾರೆ.

ಸರ್ಕಾರದ ಮಾರ್ಗಸೂಚಿ, ನಿರ್ದೇಶನಗಳ ನಡುವೆಯೇ ಸಾಂಪ್ರದಾಯಿಕ ಪೂಜೆ, ಧೂಪದ ಅಭಿಷೇಕ ನಡೆದವು. ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿತ್ತಿರುವ ಹಿನ್ನೆಲೆ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ABOUT THE AUTHOR

...view details