ಬೆಳಗಾವಿ: ಜವಳಿ ವ್ಯಾಪಾರಿಯೋರ್ವ ತನ್ನ ಕನಸಿನ ಮನೆ ನಿರ್ಮಿಸಿ ಬಡವರಿಗೆ ದಿನಸಿ ಕಿಟ್ ನೀಡುವ ಮೂಲಕ ಅರ್ಥಪೂರ್ಣವಾಗಿ ಗೃಹ ಪ್ರವೇಶ ಮಾಡಿದ್ದಾರೆ.
ಬೆಳಗಾವಿ: ಸರಳವಾಗಿ ಗೃಹ ಪ್ರವೇಶ ಮಾಡಿ ಬಡವರಿಗೆ ದಿನಸಿ ಕಿಟ್ ವಿತರಿಸಿದ ಜವಳಿ ವ್ಯಾಪಾರಿ - Ration kit
ಬೆಳಗಾವಿಯ ಜವಳಿ ವ್ಯಾಪಾರಿ ರೋಹಿತ್ ರಾವಳ್ ಸಿಂಪಲ್ ಆಗಿ ತಮ್ಮ ಮನೆ ಗೃಹ ಪ್ರವೇಶ ಮಾಡಿ 500 ಜನ ಬಡವರಿಗೆ ದಿನಸಿ ಕಿಟ್ ವಿತರಿಸಿದ್ದಾರೆ.
ಕಳೆದ 80 ವರ್ಷಗಳಿಂದ ಬೆಳಗಾವಿಯಲ್ಲಿ ವ್ಯಾಪಾರ ಮಾಡಿಕೊಂಡು ವಾಸವಿರುವ ರಾವಳ್ ಕುಟುಂಬ ಫುಲ್‌ಬಾಗ್ ಗಲ್ಲಿಯಲ್ಲಿ ಮೂರಂತಸ್ತಿನ ಭವ್ಯವಾದ ಮನೆ ನಿರ್ಮಿಸಿದ್ದಾರೆ. ಲಾಕ್‌ಡೌನ್ ಹಿನ್ನೆಲೆ ಸಾಮಾಜಿಕ ಅಂತರ ಕಾಯ್ದುಕೊಂಡು ಸಿಂಪಲ್ ಆಗಿ ಗೃಹ ಪ್ರವೇಶ ಮಾಡಿದ್ದಾರೆ.
ಅದರ ಜೊತೆಗೆ ಬೆಳಗಾವಿ ನಗರದ 500 ಬಡವರಿಗೆ ಉಚಿತವಾಗಿ ಆಹಾರ ಪದಾರ್ಥಗಳನ್ನು ನೀಡುವ ಮೂಲಕ ಮಾನವೀಯತೆ ಮೆರೆದಿದ್ದು, ಲಾಕ್‌ಡೌನ್ ಹಿನ್ನೆಲೆ ಸಂಕಷ್ಟಕ್ಕೆ ಸಿಲುಕಿದ್ದ ದಿನಗೂಲಿ ನೌಕರರು, ಬಡವರಿಗೆ ಆಸರೆಯಾಗಿದ್ದಾರೆ. ಇನ್ನು ವ್ಯಾಪಾರಸ್ಥ ರೋಹಿತ್ ರಾವಳ್ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.