ಕರ್ನಾಟಕ

karnataka

ETV Bharat / state

ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು: ನಿಲುವಳಿ ಸೂಚನೆ ಮಂಡಿಸಿದ ಸಿದ್ದರಾಮಯ್ಯ - political news

ಮೀಸಲಾತಿ ಹೆಚ್ಚಳ ಇದೊಂದು ಮಹತ್ವದ ವಿಷಯಾವಾಗಿದೆ, ಕೇವಲ ಪ್ರತಿಪಕ್ಷದ ನಾಯಕರು, ಮುಖ್ಯಮಂತ್ರಿಗಳು ಚರ್ಚೆ ನಡೆಸಿದರೆ ಸಾಲದು. ಸದನದಲ್ಲಿ ಸುದೀರ್ಘವಾಗಿ ಚರ್ಚೆ ನಡೆಯಬೇಕಿದೆ. ಹಾಗಾಗಿ, ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮನವಿ ಮಾಡಿದರು.

siddaramaiah-moved-a-standing-notice-to-allow-discussion-on-increase-in-reservation
ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು: ನಿಲುವಳಿ ಸೂಚನೆ ಮಂಡಿಸಿದ ಸಿದ್ದರಾಮಯ್ಯ

By

Published : Dec 20, 2022, 5:14 PM IST

Updated : Dec 20, 2022, 6:16 PM IST

ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ ನೀಡಬೇಕು: ನಿಲುವಳಿ ಸೂಚನೆ ಮಂಡಿಸಿದ ಸಿದ್ದರಾಮಯ್ಯ

ಬೆಳಗಾವಿ: ಮೀಸಲಾತಿ ಹೆಚ್ಚಳ ಕುರಿತು ಚರ್ಚೆಗೆ ಅವಕಾಶ ನೀಡಬೇಕೆಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಇಂದು ನಿಲುವಳಿ ಸೂಚನೆ ಮಂಡಿಸಿದರು. ಇದೊಂದು ಮಹತ್ವದ ವಿಷಯವಾಗಿರುವ ಕಾರಣ ಸದನದಲ್ಲಿ ಆನೇಕ ಸದಸ್ಯರು ಮಾತನಾಡಬೇಕಾಗಿದೆ ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಕಾಯ್ದೆಯನ್ನು ನಾವು ಸುಗ್ರೀವಾಜ್ಞೆ ಮೂಲಕ ಅಂಗೀಕರಿಸಿದ್ದೇವೆ. ರಾಜ್ಯಪಾಲರು ಇದಕ್ಕೆ ಅಂಕಿತ ಹಾಕಿದ್ದಾರೆ. ಸದನದಲ್ಲಿ ಎಲ್ಲ ಸದಸ್ಯರು ಚರ್ಚೆ ಮಾಡಬೇಕೆಂಬ ಕಾರಣಕ್ಕಾಗಿ ಮತ್ತೆ ಇದನ್ನು ಸದನದಲ್ಲಿ ಮಂಡಿಸಿದ್ದೇವೆ. ಆನೇಕ ಸದಸ್ಯರು ಇದರ ಬಗ್ಗೆ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಸರ್ಕಾರ ಚರ್ಚಿಸಲು ಮುಕ್ತವಾಗಿದೆ ಎಂದು ಹೇಳಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಮಾತನಾಡಿ, ಇದನ್ನು ಪ್ರತ್ಯೇಕವಾಗಿ ಚರ್ಚೆ ಮಾಡುವ ಬದಲು ಕೆಲವು ಕಾಯ್ದೆಗಳು ಮಂಡನೆಯಾಗಬೇಕು. ಅದರ ಜೊತೆಗೆ ತೆಗೆದುಕೊಳ್ಳುವಂತೆ ಸಲಹೆ ನೀಡಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸಿದ್ದರಾಮಯ್ಯ, ವಿರೋಧ ಪಕ್ಷದ ಉಪನಾಯಕ ಯು ಟಿ ಖಾದರ್, ಶಾಸಕ ಕೃಷ್ಣಭೈರೇಗೌಡ, ಹಿರಿಯ ಸದಸ್ಯ ಆರ್.ವಿ. ದೇಶಪಾಂಡೆ ಅವರು, ಸಭಾಧ್ಯಕ್ಷರೇ ಪ್ರತ್ಯೇಕ ಚರ್ಚೆಗೆ ಅವಕಾಶ ನೀಡುವುದಾಗಿ ಹೇಳಿದ್ದಾರೆ. ಇದಕ್ಕೆ ಸಭಾನಾಯಕರು ಕೂಡ ಸಮ್ಮತಿಸಿದ್ದಾರೆ. ಆದರೆ ನೀವು ಏಕೆ ಆಕ್ಷೇಪಿಸುತ್ತಿದ್ದೀರಿ ಎಂದು ಪ್ರಶ್ನಿಸಿದರು.

ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಚಿವ ಮಾಧುಸ್ವಾಮಿ, ಚರ್ಚೆಗೆ ಬೇಡ ಎಂದು ನಾವು ಹೇಳುತ್ತಿಲ್ಲ. ಸದನವು ನಿಯಮಗಳ ಪ್ರಕಾರ ನಡೆಯಬೇಕು. ಮೊದಲು ಕಾಯ್ದೆಗಳು ಮಂಡನೆಯಾಗಲಿ, ನಂತರ ಚರ್ಚೆಯಾಗಲಿ. ನಂತರ ಸರ್ಕಾರ ಉತ್ತರ ಕೊಡಲು ಸಿದ್ಧವಿದೆ ಎಂದು ಹೇಳಿದರು.

ಈ ವೇಳೆ ಸಚಿವ ಗೋವಿಂದ ಕಾರಜೋಳ ಮಧ್ಯಪ್ರವೇಶಿಸಿ, ನಾವು ಚರ್ಚೆಗೆ ವಿರೋಧಿಸುತ್ತಿಲ್ಲ. ಕಾಂಗ್ರೆಸ್​ನವರು ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಾವು ಮಾಡದೇ ಇರುವುದನ್ನು ಬಿಜೆಪಿಯವರು ಮಾಡಿದ್ದಾರೆಂದು ಹೊಟ್ಟೆ ಉರಿ ಇದೆ ಎಂದು ಪ್ರತಿಪಕ್ಷದ ಸದಸ್ಯರ ಕಾಲೆಳೆದರು.

‘ನಿಜವಾದ ಮೀಸಲಾತಿ ವಿರೋಧಿಗಳು ಯಾರೆಂಬುದು ಜಗತ್ತಿಗೆ ಗೊತ್ತು’:ಇದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ನಾವು ಕಾಯ್ದೆಗೆ ಎಲ್ಲೂ ವಿರೋಧಿಸುತ್ತಿಲ್ಲ. ಸರ್ವಪಕ್ಷಗಳ ಸಭೆಯಲ್ಲಿ ನಮ್ಮ ನಿಲುವು ಏನು ಎಂಬುದನ್ನು ತಿಳಿಸಿದ್ದೇವೆ. ಅಲ್ಲದೆ ಇದಕ್ಕೆ ಬೇಕಾದ ಸಲಹೆಯನ್ನು ಕೂಡ ಕೊಟ್ಟಿದ್ದೇವೆ. ಮೀಸಲಾತಿ ವಿರೋಧಿಗಳು ಯಾರು ಎಂಬುದು ಜಗತ್ತಿಗೆ ಗೊತ್ತು, ಮಂಡಲ್ ಆಯೋಗ ಜಾರಿ ಮಾಡಲು ಹೊರಟಾಗ ಅದನ್ನು ವಿರೋಧಿಸಿದವರು ಯಾರು? ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡ ರಾಮಜೋಯಿಸ್‌ ಎಂಬುವರು ಯಾವ ಪಕ್ಷಕ್ಕೆ ಸೇರಿದ್ದರು? ಸುಪ್ರೀಂಕೋರ್ಟ್‌ಗೆ ಹೋದವರು ಯಾರು? ನಿಜವಾದ ಮೀಸಲಾತಿ ವಿರೋಧಿಗಳೆಂದರೆ ಅದು ಬಿಜೆಪಿಯವರು ಎಂದು ತಿರುಗೇಟು ನೀಡಿದರು.

ಇದೇ ಸಂದರ್ಭದಲ್ಲಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿ ವರ್ಗದವರಿಗೆ ಮೀಸಲಾತಿ ಹೆಚ್ಚಳ ಮಾಡುವ ಕಾಯಿದೆ ಕುರಿತು ಚರ್ಚೆಗೆ ಅವಕಾಶ ನೀಡುವುದಾಗಿ ಪ್ರಕಟಿಸಿದರು.

ಇದನ್ನೂ ಓದಿ:ಚಳಿಗಾಲ ಅಧಿವೇಶನದ ವಿಧಾನಸಭೆ: 4 ವಿಧೇಯಕಗಳಿಗೆ ಒಪ್ಪಿಗೆ

Last Updated : Dec 20, 2022, 6:16 PM IST

ABOUT THE AUTHOR

...view details