ಕರ್ನಾಟಕ

karnataka

ETV Bharat / state

ಆನ್‍ಲೈನ್ ಮೂಲಕ ಅಗತ್ಯ ಸಾಮಗ್ರಿ ಖರೀದಿಸಿ: ಸಚಿವೆ ಶಶಿಕಲಾ ಜೊಲ್ಲೆ - ಸಚಿವೆ ಶಶಿಕಲಾ ಜೊಲ್ಲೆ

ಕೊರೊನಾ ಹಿನ್ನೆಲೆ ರೋಗ ಹರಡುವಿಕೆ ತಡೆಗಟ್ಟಲು ಅಗತ್ಯ ಸಾಮಾಗ್ರಿಗಳನ್ನು ಮನೆ ಮನೆಗೆ ತಲುಪಿಸಲು ಆ್ಯಪ್ ಬಿಡುಗಡೆಗೊಳಿಸಲಾಯಿತು.

jolle
ಶಶಿಕಲಾ ಜೊಲ್ಲೆ

By

Published : Apr 18, 2020, 3:36 PM IST

ಚಿಕ್ಕೋಡಿ (ಬೆಳಗಾವಿ):ಆನ್‍ಲೈನ್ ಮಾರುಕಟ್ಟೆ ಮೂಲಕ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಮನೆ ಬಾಗಿಲಿಗೆ ಉಚಿತ ಸೇವೆ ಪ್ರಾರಂಭಿಸಿದ್ದು, ಈ ಆನ್‍ಲೈನ್ ಮಾರುಕಟ್ಟೆ ಮೂಲಕ ಅತ್ಯವಶ್ಯಕ ಸಾಮಗ್ರಿಗಳನ್ನು ಪಡೆದುಕೊಳ್ಳಿ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ನಿಪ್ಪಾಣಿ ನಗರಸಭೆ, ಭಾರತೀಯ ವಿಚಾರ ಮಂಚ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಆ್ಯಪ್ ಉದ್ಘಾಟನೆ ಮಾಡಿದ ಬಳಿಕ ಮಾತನಾಡಿದ ಅವರು, ಕೋವಿಡ್-19 ರೋಗವನ್ನು ತಡೆಗಟ್ಟಲು ಏಕೈಕ ಮಾರ್ಗೋಪಾಯವಾದ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದು ಅತ್ಯವಶ್ಯಕತೆವಾಗಿದೆ ಎಂದರು.

ಆನ್‍ಲೈನ್ ಮೂಲಕ ಅಗತ್ಯ ಸಾಮಗ್ರಿ ಖರೀದಿಸಲು ಹೇಳಿದ ಶಶಿಕಲಾ ಜೊಲ್ಲೆ

ಈಗಾಗಲೇ ಬೆಳಗಾವಿ ಜಿಲ್ಲೆಯನ್ನು ರೆಡ್ ಝೋನ್ ಅಂತ ಗುರತಿಸಲಾಗಿದ್ದು, ರೋಗ ಹರಡುವಿಕೆಯನ್ನು ತಡೆಗಟ್ಟಲು ಅನುಸರಿಸಬೇಕಾದ ಎಲ್ಲಾ ಮಾರ್ಗೋಪಾಯಗಳನ್ನು ಕಟ್ಟೆಚ್ಚರದಿಂದ ಪಾಲಿಸಬೇಕಾಗಿದೆ. ಆದರೆ ಸಾವಿರಾರು ಜನರು ಅಂಗಡಿಗಳಿಗೆ ಬಂದು ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ಸಾಮಗ್ರಿ ಖರೀದಿಸುವುದನ್ನು ಪ್ರತಿ ದಿನ ನಾವು ನೋಡುತ್ತಿದ್ದೇವೆ ಎಂದು ಹೇಳಿದರು.

ಈವರೆಗೂ ಕೊರೊನಾ ಹರಡುವಿಕೆ ನಿಪ್ಪಾಣಿ ನಗರದಲ್ಲಿ ಕಂಡು ಬಂದಿಲ್ಲ. ಇಂತಹ ಪರಿಸ್ಥಿಯಲ್ಲಿ ಆನ್‍ಲೈನ್​ ಮಾರುಕಟ್ಟೆ ಮೂಲಕ ಸ್ವಯಂ ಸೇವಕರ ಸಹಾಯದಿಂದ ಅಂಗಡಿಯವರಿಂದ ನೇರವಾಗಿ ಗ್ರಾಹಕರ ಮನೆಗೆ ತಲುಪುವದರಿಂದ ಅಷ್ಟು ಗ್ರಾಹಕರು ನಗರದ ಮಧ್ಯ ಭಾಗದ ಅಂಗಡಿಗಳಿಗೆ ಬರುವ ಅಗತ್ಯವಿರುವುದಿಲ್ಲ. ಈ ಮೂಲಕ ರೋಗ ಹರಡುವಿಕೆ ತಡೆಯಲು ಈ ತಂತ್ರಾಂಶ ಸಹಕಾರಿಯಾಗಿದೆ ಎಂದರು.

ಆನ್‍ಲೈನ್ ತಂತ್ರಾಂಶ ಮಾಹಿತಿ ನೀಡುತ್ತಾ ಕುನ್ನೂರು ಗ್ರಾಮದ ಬಾಬಾಸಾಹೇಬ ಸಂಜಯ ರಾಮಣಕಟ್ಟಿ, ಗೂಗಲ್ ಪ್ಲೇ ಸ್ಟೋರ್​ನಿಂದ FARMSHIP ಎಂಬ ಆ್ಯಪ್ ಡೌನಲೋಡ್ ಮಾಡಿಕೊಂಡ ನಂತರ ತಮಗೆ ಬೇಕಾಗುವ ಅತ್ಯಾವಶ್ಯಕ ವಸ್ತುಗಳನ್ನು ಸ್ಟೋರ್​ಗಳ ಮುಖಾಂತರ ಆಯ್ಕೆ ಮಾಡಿ, ಸಾಮಗ್ರಿಗಳಿಗೆ ನಿಗದಿಪಡಿಸಿದ ದರವನ್ನು ಪರಿಶೀಲಿಸಿ ತಮಗೆ ಬೇಕಾದ ಅಂಗಡಿಗಳಿಂದ ಸಾಮಗ್ರಿ ಆದೇಶವನ್ನು ನೀಡಿ ತಮ್ಮ ವಿಳಾಸದೊಂದಿಗೆ ಸೇವೆಯನ್ನು ಪಡೆದು ಹಣ ಸಂದಾಯ ಮಾಡಬಹುದಾಗಿದೆ ಎಂದು ವಿವರಿಸಿದರು.

ABOUT THE AUTHOR

...view details