ಚಿಕ್ಕೋಡಿ:ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲಲ್ ಅವರ ಅಭಿವೃದ್ಧಿ ಹಾಗೂ ಜನಪರ ಕೆಲಸಗಳನ್ನು ನೋಡಿ ಅನಂತಪೂರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹದೇವ ಕೋರೆ ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
ಕೈ ಬಿಟ್ಟು ಕಮಲ ಮುಡಿಯಲು ಸಜ್ಜಾದ ಅನಂತಪೂರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ - ಕಾಂಗ್ರೆಸ್ ಪಕ್ಷ ಬಿಟ್ಟ ಮಹದೇವ ಕೋರೆ
ಕಾಗವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲಲ್ ಅವರ ಅಭಿವೃದ್ಧಿ ಹಾಗೂ ಜನಪರ ಕೆಲಸಗಳನ್ನು ನೋಡಿ ಅನಂತಪೂರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹದೇವ ಕೋರೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಲು ಸಜ್ಜಾಗಿದ್ದಾರೆ.
ಕಾಂಗ್ರೆಸ್ ಪಕ್ಷ ಅನಂತಪೂರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಹದೇವ ಕೋರೆ
ಶನಿವಾರ ಕಾಗವಾಡ ತಾಲೂಕಿನ ಕೆಂಪವಾಡ ಗ್ರಾಮದಲ್ಲಿ ಈಟಿವಿ ಭಾರತನೊಂದಿಗೆ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರ ಸಮ್ಮುಖದಲ್ಲಿ ನಾನು ಬಿಜೆಪಿ ಸೇರುವೆ. ಮೊದಲಿನಿಂದ ಕಾಂಗ್ರೆಸ್ ಪಕ್ಷಕ್ಕಾಗಿ ದುಡಿದವನು. ಆದ್ರೆ ಪ್ರಸ್ತುತ ಬಿಜೆಪಿ ಮಾಡಿದಷ್ಟು ಕಾರ್ಯಗಳನ್ನು ಯಾರೂ ಮಾಡಲು ಸಾಧ್ಯವಿಲ್ಲ. ಕಳೆದ 14 ತಿಂಗಳಲ್ಲಿ ಮಾಡಿದಷ್ಟು ಕೆಲಸಗಳನ್ನು ಈವರೆಗೆ ಯಾರೂ ಸಹ ಮಾಡಿಲ್ಲ. ಶ್ರೀಮಂತ ಪಾಟೀಲ್ ಅವರ ಬೆನ್ನಿಗೆ ನಿಂತು ಅವರನ್ನು ಗೆಲ್ಲಿಸಿ ತರುತ್ತೇವೆ ಎಂದರು.