ಚಿಕ್ಕೋಡಿ : ಕ್ಷೇತ್ರದಲ್ಲಿ ಶಾಂತ ರೀತಿಯಲ್ಲಿ ಮತದಾನ ನಡೆದಿದ್ದು, ಇವತ್ತು ನಾವು ರಿಲ್ಯಾಕ್ಸ್ ಆಗಿದ್ದೇವೆ. ಪ್ರತಿ ಗ್ರಾಮದ ಕಾರ್ಯಕರ್ತರು ಗುಂಪಾಗಿ ಬಂದು ಭೇಟಿಯಾಗುತ್ತಿದ್ದು, ಮತದಾನದ ವರದಿಯನ್ನು ನೀಡುತ್ತಿದ್ದಾರೆ. ಅವರ ಹೇಳಿಕೆ ಪ್ರಕಾರ, ಪ್ರತಿ ಗ್ರಾಮದಲ್ಲಿ 65 ರಿಂದ 70 ಪ್ರತಿಶತ ಮತ ಬಿಜೆಪಿಗೆ ಬೀಳುತ್ತವೆ. ಈ ಬಾರಿ ಗೆಲುವು ಬಿಜೆಪಿಗೆ ಎಂದು ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಕಾಗವಾಡದಲ್ಲಿ ಗೆಲುವು ನಮ್ಮದೇ: ಶ್ರೀಮಂತ ಪಾಟೀಲ ವಿಶ್ವಾಸ - ಶಾಂತಾ ರೀತಿಯಲ್ಲಿ ಮತದಾನ ನಡೆದಿದೆ ಎಂದ ಶ್ರೀಮಂತ ಪಾಟೀಲ್
ಕಾಗವಾಡ ಬಿಜೆಪಿ ಅಭ್ಯರ್ಥಿ ಶ್ರೀಮಂತ ಪಾಟೀಲ ಕಾರ್ಯಕರ್ತರ ಜೊತೆ ಮಾತಿಗಿಳಿದು ಮತಕ್ಷೇತ್ರದಲ್ಲಿ ಯಾವ ರೀತಿ ಮತದಾನ ನಡೆದಿದೆ ಎಂಬುವುದರ ಕುರಿತು ಚರ್ಚೆ ನಡೆಸಿದ್ದಾರೆ.

ಕಾಗವಾಡ ಮತ ಕ್ಷೇತ್ರದ ಕೆಂಪವಾಡ ಗ್ರಾಮದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಅವರು, ನಾವು 15 ದಿನ ಕಾರ್ಯನಿರತರಾಗಿದ್ವಿ. ಪ್ರತಿಯೊಂದು ಹಳ್ಳಿಗೂ ನಾವು ಒಡಾಡಿಕೊಂಡಿದ್ದೆವು. ನಮ್ಮ ಪ್ರಚಾರಕ್ಕೆ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಸಿ.ಸಿ. ಪಾಟೀಲ, ಲಕ್ಷ್ಮಣ ಸವದಿ ಬಂದಿದ್ದರು ಎಂದರು.
ನಂತರ ಮಾತು ಮುಂದುವರೆಸಿದ ಅವರು, ನಿನ್ನೆ ಶಾಂತಾ ರೀತಿಯಲ್ಲಿ ಮತದಾನ ನಡೆದಿದೆ, ಇವತ್ತು ನಾವು ರಿಲ್ಯಾಕ್ಸ್ ಆಗಿದ್ದೇವೆ, ಪ್ರತಿ ಗ್ರಾಮದ ಕಾರ್ಯಕರ್ತರು ಗುಂಪಾಗಿ ಬಂದು ನಮ್ಮನ್ನು ಭೇಟಿಯಾಗುತ್ತಿದ್ದು, ಮತದಾನದ ಬಗ್ಗೆ ವರದಿಯನ್ನು ನೀಡುತ್ತಿದ್ದಾರೆ, ಅವರ ಹೇಳಿಕೆ ಪ್ರಕಾರ, ಪ್ರತಿ ಗ್ರಾಮದಲ್ಲಿ 65 ರಿಂದ 70 ಪ್ರತಿಶತ ಮತ ಬಿಜೆಪಿಗೆ ಬೀಳುತ್ತವೆ ಎಂದು ಹೇಳುತ್ತಿದ್ದಾರೆ. ಆದರೆ ಮೂರ್ನಾಲ್ಕು ಗ್ರಾಮದಲ್ಲಿ ಮಾತ್ರ ವ್ಯತ್ಯಾಸ ಕಂಡು ಬರುತ್ತಿದೆ. ಆದರೆ, ಗೆಲುವು ಮಾತ್ರ ನಮ್ಮದೆ ಎನ್ನುವ ವಿಶ್ವಾಸವನ್ನು ವ್ಯಕ್ತಪಡಿಸಿದರು.