ಕರ್ನಾಟಕ

karnataka

ETV Bharat / state

ಮಾರಕ ಬೌಲಿಂಗ್​ ದಾಳಿಗೆ ಲಂಕಾ ತತ್ತರ: ಫಾಲೋ ಆನ್​ಗೆ ಸಿಲುಕಿದ ಸಿಂಹಳೀಯರು - undefined

ಭಾರತ ಎ ತಂಡದ ಬೌಲರ್​ಗಳ ಬಿರುಸಿನ ದಾಳಿಗೆ ಲಂಕಾ ಆಟಗಾರರು ತರಗೆಲೆಗಳಂತೆ ಉದುರಿ ಹೋಗಿದ್ದು, ಫಾಲೋ ಆನ್​ಗೆ ಸಿಲುಕಿದ್ದಾರೆ.

ಫಾಲೋ ಆನ್​ಗೆ ಸಿಲುಕಿದ ಸಿಂಹಳಿಯರು

By

Published : May 27, 2019, 3:29 PM IST

ಬೆಳಗಾವಿ:ಅಬ್ಬರದ ಬ್ಯಾಟಿಂಗ್ ಮೂಲಕ ಬೃಹತ್ ರನ್ ಕಲೆ ಹಾಕಿದ್ದ ಭಾರತ ಎ ತಂಡದ ಆಟಗಾರರು ಬೌಲಿಂಗ್ ವಿಭಾಗದಲ್ಲೂ ಅಬ್ಬರಿಸಿದ್ದಾರೆ.
ಇಲ್ಲಿನ ಆಟೋನಗರದ ಕೆಎಸ್​ಸಿಎ ಮೈದಾನದಲ್ಲಿ ನಡೆಯುತ್ತಿರುವ ಮೂರು ದಿನಗಳ ಟೆಸ್ಟ್​​ ಪಂದ್ಯದಲ್ಲಿ ಶ್ರೀಲಂಕಾ ಎ ವಿರುದ್ಧದ ಪಂದ್ಯದಲ್ಲಿ ಭಾರತೀಯರ ಮಾರಕ ಬೌಲಿಂಗ್ ದಾಳಿಗೆ ಲಂಕಾ ಬ್ಯಾಟ್ಸ್‌ಮನ್‌ ಗಳು ಪೆವಿಲಿಯನ್ ಪರೇಡ್ ನಡೆಸಿದ್ದಾರೆ.

ಎರಡನೇ ದಿನದಾಟದ ಅಂತ್ಯದಲ್ಲಿ 4 ವಿಕೆಟ್ ನಷ್ಟಕ್ಕೆ 83 ರನ್ ಗಳಿಸಿದ್ದ ಲಂಕಾ ಬ್ಯಾಟ್ಸ್‌ಮನ್​ಗಳು ಇಂದು ಭೋಜನ ವಿರಾಮಕ್ಕೆ ಮುನ್ನ 231 ರನ್​ಗಳಿಗೆ ಸರ್ವಪತನ ಕಂಡಿತು. ಮೊದಲ ಇನ್ನಿಂಗ್ಸ್ ‌ನಲ್ಲಿ ಭಾರತ 391 ರನ್ ಮುನ್ನಡೆ ಸಾಧಿಸಿದೆ.

ಶ್ರೀಲಂಕಾ ಪರ ನಿಶ್ಚಲ್ ಡಿಕ್ವೆಲ್ಲಾ ಶತಕ 103 ಹಾಗೂ ಆಶನ್ ಪ್ರಿಯಾಂಜನ್ 49 ರನ್​ ಗಳಿಸಿದ್ದು ಬಿಟ್ಟರೆ ಉಳಿದ ಆಟಗಾರರು ನಿರೀಕ್ಷಿತ ಪ್ರದರ್ಶನ ತೋರಲಿಲ್ಲ.
ಭಾರತ ಎ ತಂಡದ ಪರ ಸಂದೀಪ್ ವಾರಿಯರ್ 2 , ಶಿವಂ ದುಬೆ 2, ಆರ್.ಡಿ. ಚಾಹರ್ 4, ಹಾಗೂ ಜೆ.ಜೆ.ಯಾದವ್ 2 ವಿಕೆಟ್ ಗಳಿಸಿದ್ದಾರೆ.

ಎರಡನೇ ಇನ್ನಿಂಗ್ಸ್ ಆರಂಭಿಸಿರುವ ಲಂಕಾ ತಂಡ ಪ್ರಮುಖ 12 ರನ್​ಗಳಿಗೆ ಮೂರು ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಸಿಲುಕಿದೆ. ಭಾರತದ ಪರ ಅಂಕಿತ್ ರಜಪೂತ್​ 2 ಹಾಗೂ ಸಂದೀಪ್ ವಾರಿಯರ್ 1 ವಿಕೆಟ್ ಕಬಳಿಸಿದ್ದು, ದ್ವಿತೀಯ ಇನ್ನಿಂಗ್ಸ್​ನಲ್ಲೂ ಲಂಕಾ ಬ್ಯಾಟ್ಸ್‌ಮನ್​ಗಳಿಗೆ ಪೆವಿಲಿಯನ್ ದಾರಿ ತೋರಿದ್ದಾರೆ.

For All Latest Updates

TAGGED:

ABOUT THE AUTHOR

...view details