ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಅಪಾರ ಮೌಲ್ಯದ ಕಬ್ಬಿನ ಬೆಳೆ ನಾಶವಾದ ಘಟನೆ ಸವದತ್ತಿ ತಾಲೂಕಿನ ಕೆಂಚಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಶಾರ್ಟ್ ಸರ್ಕ್ಯೂಟ್: ಅಪಾರ ಪ್ರಮಾಣದ ಕಬ್ಬು ಬೆಳೆ ನಾಶ - Short Circuit
ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿ ಅಪಾರ ಮೌಲ್ಯದ ಕಬ್ಬಿನ ಬೆಳೆ ನಾಶವಾದ ಘಟನೆ ಸವದತ್ತಿ ತಾಲೂಕಿನ ಕೆಂಚಲಾರಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕಬ್ಬು ಬೆಳೆ ನಾಶ
ರೈತ ನಿಂಗಪ್ಪ ಚಿದಂಬರ ಹಾದಿಮನಿಯವರ ಎರಡು ಎಕರೆ ಹೊಲಕ್ಕೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹತ್ತಿಕೊಂಡಿದ್ದು, ಕ್ಷರ್ಣಾದಲ್ಲಿ ಕಬ್ಬಿನ ಭೂಮಿ ಸುಟ್ಟುಕರಲಾಗಿದೆ. ಸ್ಥಳಕ್ಕೆ ಧಾವಿಸಿದ ಮಾಲೀಕ ನಿಂಗಪ್ಪ ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಬಿಸಿಲು, ಗಾಳಿಯ ಹೊಡೆತಕ್ಕೆ ಬೆಂಕಿ ಗದ್ದೆಯನ್ನು ಆವರಿಸಿಕೊಂಡಿದ್ದು, ಅಪಾರ ಮೌಲ್ಯದ ಕಬ್ಬು ಸುಟ್ಟು ಕರಕಲಾಗಿದೆ. ಈ ಕುರಿತು ಸವದತ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.