ಬೆಳಗಾವಿ:ಪೊಲೀಸರ ಸಮ್ಮುಖದಲ್ಲೇ ವ್ಯಕ್ತಿವೋರ್ವ ಸಾರ್ವಜನಿಕ ಸ್ಥಳದಲ್ಲೇ ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ಕುಂದಾನಗರಿಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಗುರುನಾನಕ್ ಜಯಂತಿ ಪ್ರಯುಕ್ತ ಏರ್ಪಡಿಸಿದ್ದ ಸಾರ್ವಜನಿಕ ಮೆರವಣಿಗೆಯಲ್ಲಿ ವ್ಯಕ್ತಿವೋರ್ವ ಓಪನ್ ಫೈರಿಂಗ್ ಮಾಡಿದ್ದಾನೆ.

ಗುರುನಾನಕ ಜಯಂತಿ ಅಂಗವಾಗಿ ಸಿಖ್ ಸಮುದಾಯದ ಜನರಿಂದ ನಗರದಲ್ಲಿ ಎರಡು ದಿನಗಳ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಸಾರೋಟ, ಕುದುರೆ ಇನ್ನಿತರ ವಾಹನಗಳನ್ನು ಸಮೇತ ಬಂದ ಮೆರವಣಿಗೆಯನ್ನು ಚೆನ್ನಮ್ಮ ವೃತ್ತದಲ್ಲಿರುವ ಬಿಮ್ಸ್ ಎದುರು ಸ್ವಾಗತಿಸಲಾಗಿತ್ತು.
ಮೆರವಣಿಗೆಯಲ್ಲಿ ಕುದುರೆ ಮೇಲೆ ಬಂದ ವ್ಯಕ್ತಿಗೆ ಹೂವಿನ ಹಾರ ಹಾಕಿ ಸ್ವಾಗತಿಸುವ ವೇಳೆ ವ್ಯಕ್ತಿವೋರ್ವ ಗಾಳಿಯಲ್ಲಿ ಒಂದು ಸುತ್ತಿನ ಗುಂಡು ಹಾರಿಸಿದ್ದಾನೆ.ಗುಂಡಿನ ಸದ್ದಿಗೆ ಹೆದರಿ ಕುದುರೆ ಕೂಡ ಹಿಂದೆ ಸರಿದಿದೆ. ಅಲ್ಲದೇ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯರು, ಮಕ್ಕಳು ಕೂಡ ಭಯಬೀತರಾಗಿದ್ದರು.
ಗಾಳಿಯಲ್ಲಿ ಗುಂಡುಹಾರಿಸಿ ಎರಡು ದಿನ ಕಳೆದರೂ ಪೊಲೀಸರು ವ್ಯಕ್ತಿಯ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂಬ ಆರೋಪ ಕೇಳಿಬಂದಿದೆ. ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.