ಚಿಕ್ಕೋಡಿ: ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅವರನ್ನು ಬೆಂಬಲಿಸಿದ ನಟರಾದ ದರ್ಶನ್ ಮತ್ತು ಯಶ್ ಅವರನ್ನು ಚುನಾವಣೆ ಮುಗಿದ ಬಳಿಕ ನೋಡಿಕೊಳ್ಳುವುದಾಗಿ ಹೇಳಿದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಗೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಮಂಡ್ಯ ಚುನಾವಣೆಯಲ್ಲಿ ದರ್ಶನ್-ಯಶ್ ಪಾಲ್ಗೊಂಡಿದ್ದೇ ತಪ್ಪಾ? ಸಿಎಂ ಹೇಳಿಕೆಗೆ ಶೋಭಾ ಕರಂದ್ಲಾಜೆ ಏನಂದ್ರು? - etv bharat
ಸ್ಯಾಂಡಲ್ವುಡ್ ನಟರಾದ ದರ್ಶನ್ ಮತ್ತು ಯಶ್ ಪಕ್ಷೇತರ ಅಭ್ಯರ್ಥಿ, ನಟಿ ಸುಮಲತಾ ಅವರನ್ನು ಬೆಂಬಲಿಸಿದ್ದೇ ತಪ್ಪಾ? ಮಂಡ್ಯ ಚುನಾವಣೆಯಲ್ಲಿ ಇವರ ಪಾಲುದಾರಿಕೆ ಬಗ್ಗೆ ಕಿಡಿಕಾರಿದ್ದ ಮುಖ್ಯಮಂತ್ರಿ ಕುಮಾಸ್ವಾಮಿ ಅವರ ಹೇಳಿಕೆಗೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಪ್ರತಿಕ್ರಿಯೆ ನೀಡಿದ್ದಾರೆ.
ಚಿಕ್ಕೋಡಿಯಲ್ಲಿ ಚುನಾವಣಾ ಪ್ರಚಾರಾರ್ಥವಾಗಿ ಆಗಮಿಸಿದಾಗ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಯಶ್ ಮತ್ತು ದರ್ಶನ್ಗೆ ಧಮ್ಕಿ ಕೊಟ್ಟಿದ್ದು ಕುಮಾರಸ್ವಾಮಿ ಅವರ ಹಿಟ್ಲರ್ ಸಂಸ್ಕೃತಿಯನ್ನು ಎತ್ತಿ ತೋರಿಸುತ್ತಿದೆ. ವಿನಾಶಕಾಲೇ ವಿಪರೀತ ಬುದ್ಧಿ ಅನ್ನುವ ಮಾತನ್ನು ಹಿರಿಯರು ಇದಕ್ಕಾಗಿಯೇ ಹೇಳಿದ್ದಾರೆ. ಕುಮಾರಸ್ವಾಮಿ ಅವರು ಮುಂದಿನ ದಿನಮಾನಗಳಲ್ಲಿ ಅನುಭವಿಸುತ್ತಾರೆ ಎಂದು ಮಾರ್ಮಿಕವಾಗಿ ನುಡಿದರು.
ಬಿಜೆಪಿ ಎಲ್ಲ ಕಾಲದಲ್ಲಿಯೂ ಕಲಾವಿದರ ಪರವಾಗಿಯೇ ಇದೆ. ನಾವು ಪಕ್ಷ ಭೇದ ಮರೆತು ಅವರ ಸಿನಿಮಾ ನೊಡುತ್ತೇವೆ. ಇದರಿಂದ ಮನರಂಜನೆಯನ್ನು ಪಡೆಯುತ್ತೇವೆ. ಯಶ್ ಮತ್ತು ದರ್ಶನ್ ಬಿಜೆಪಿಯವರಲ್ಲ. ಆದರೆ ಅವರು ಕಲಾವಿದರು. ಅದಕ್ಕಾಗಿ ಅವರ ಪರವಾಗಿದ್ದೇವೆ. ಕುಮಾರಸ್ವಾಮಿಗೆ ಕನ್ನಡ ನಾಡಿನ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.