ಕರ್ನಾಟಕ

karnataka

ETV Bharat / state

ವಿಪಕ್ಷದಲ್ಲಿದ್ದವರು ಧ್ವನಿ ಎತ್ತಬೇಕು, ಆಡಳಿತದಲ್ಲಿದ್ದವರು ಕೆಲಸ ಮಾಡಬೇಕು: ಶೋಭಾ ಕರಂದ್ಲಾಜೆ

ಮಂಗಳಾ ಅಂಗಡಿ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಸಿಎಂ ಆಗಿ, ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದರೂ ಕೂಡ ಹಗುರ ಮಾತುಗಳನ್ನಾಡುವುದನ್ನು ಬಿಟ್ಟಿಲ್ಲ ಎಂದು ಶೋಭಾ ಕರಂದ್ಲಾಜೆ ಹೇಳಿದರು.

shobha karandlaje
ಸಂಸದೆ ಶೋಭಾ ಕರಂದ್ಲಾಜೆ

By

Published : Apr 11, 2021, 8:18 PM IST

ಬೆಳಗಾವಿ: ಬರುವ ಉಪಚುನಾವಣೆಗಳಲ್ಲಿ ಬಿಜೆಪಿ ಭಾರಿ ಅಂತರದಲ್ಲಿ ಜಯ ಗಳಿಸಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷ ಗೆಲುವು ಸಾಧಿಸಲಿದೆ. ಅದಕ್ಕಾಗಿ ನಮ್ಮ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ಅಬ್ಬರ ಮಾಡುತ್ತಿಲ್ಲ. ಮಂಗಳಾ ಅಂಗಡಿಯವರು ಬಹು ದೊಡ್ಡ ಅಂತರದಿಂದ ಜಯ ಸಾಧಿಸುತ್ತಾರೆ ಎಂದರು.

ಸಂಸದೆ ಶೋಭಾ ಕರಂದ್ಲಾಜೆ

ಮಂಗಳಾ ಅಂಗಡಿ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಸಿಎಂ ಆಗಿ, ವಿಪಕ್ಷ ನಾಯಕರಾಗಿ ಸೇವೆ ಸಲ್ಲಿಸಿದರೂ ಕೂಡ ಹಗುರ ಮಾತುಗಳನ್ನಾಡುವುದನ್ನು ಬಿಟ್ಟಿಲ್ಲ. ಅವರಿರುವ ಪಕ್ಷದ ನಾಯಕಿ ಈ ದೇಶದ ಆಡಳಿತ ಮಾಡಿದ್ರು. ಈ ದೇಶದಲ್ಲಿ ಮಹಿಳಾ ಪ್ರಧಾನಿಯಾಗಿ ಆಡಳಿತ ನಡೆಸಿದ್ದರು. ಆದ್ರೂ ಇಂತಹ ಹೇಳಿಕೆಗಳನ್ನು ನೀಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಸುರೇಶ್ ಅಂಗಡಿ ಮಂತ್ರಿಯಾದ ಮೇಲೆ ದಾಖಲೆ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಆದ್ರೆ ಸಿದ್ದರಾಮಯ್ಯರ ನಾಲಿಗೆಗೆ ಮತ್ತು ಮೆದುಳಿಗೆ ಕಂಟ್ರೋಲ್ ಇಲ್ಲವೆಂದು ಸಾಬೀತಾಗಿದೆ‌ ಎಂದರು.

ಇದನ್ನೂ ಓದಿ:ಕರ್ನಾಟಕ: ಒಂದೇ ದಿನ 10,250 ಮಂದಿಗೆ ಸೋಂಕು ದೃಢ!

ರಾಜ್ಯದಿಂದ 25 ಬಿಜೆಪಿ ಸಂಸದರಿದ್ದರೂ ಕೂಡ ರಾಜ್ಯಕ್ಕಾಗಿ ಸಂಸತ್​​ನಲ್ಲಿ ಧ್ವನಿ ಎತ್ತುತ್ತಿಲ್ಲ ಎಂಬ ಸಿದ್ದರಾಮಯ್ಯರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಧ್ವನಿ ಎತ್ತುವ ಅಗತ್ಯ ಇಲ್ಲ. ನಮ್ಮ ಕ್ಷೇತ್ರಕ್ಕೆ, ರಾಜ್ಯಕ್ಕೆ ಏನು ಬೇಕೋ ಅದನ್ನು ಪ್ರಧಾನಿ ಕೊಡುತ್ತಿದ್ದಾರೆ. ವಿಪಕ್ಷದಲ್ಲಿದ್ದವರು ಧ್ವನಿ ಎತ್ತಬೇಕು, ಆಡಳಿತ ಪಕ್ಷದಲ್ಲಿದ್ದವರು ಕೆಲಸ ಮಾಡಬೇಕು. ಇಷ್ಟು ವರ್ಷವಾದ ಮೇಲಾದರೂ ಸಿದ್ದರಾಮಯ್ಯ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.

ABOUT THE AUTHOR

...view details