ಬೆಳಗಾವಿ: ಗೋ ರಕ್ಷಕ ಶಿವು ಉಪ್ಪಾರರದ್ದು ಆತ್ಮಹತ್ಯೆ ಅಲ್ಲ, ಅದು ಕೊಲೆ. ಈ ಪ್ರಕರಣವನ್ನು ಸಿಬಿಐಗೆ ಒಪ್ಪಿಸಲೇಬೇಕು ಎಂದು ಗೋರಕ್ಷಕ ದಳ, ರೈತ ಸಂಘಟನೆಗಳು, ಸಾಮಾಜಿ ಸಂಘಟನೆ ಹಾಗೂ ಇನ್ನೂ ಹತ್ತಾರು ಸಂಘಟನೆಗಳ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಶಿವು ಉಪ್ಪಾರ ಸಾವಿನ ಪ್ರಕರಣ ಸಿಬಿಐಗೊಪ್ಪಿಸಲು ವಿವಿಧ ಸಂಘಟನೆಗಳ ಆಗ್ರಹ - undefined
ಗೋಪ್ರೇಮಿ ಹಾಗೂ ಗೋರಕ್ಷ ಶಿವು ಉಪ್ಪಾರನ ಸಾವು ನಿಘೂಡವಾಗಿದೆ. ಅದು ಆತ್ಮಹತ್ಯೆ ಅಲ್ಲ, ಉದ್ದೇಶಪೂರ್ವಕವಾಗಿ ಮಾಡಿರುವ ಕೊಲೆ, ಇದನ್ನು ಸಿಬಿಐಗೆ ಒಪ್ಪಿಸಲೇಬೇಕೆಂದು ವಿವಿಧ ಸಂಘಟನೆಗಳು ಆಗ್ರಹಿಸಿವೆ.
![ಶಿವು ಉಪ್ಪಾರ ಸಾವಿನ ಪ್ರಕರಣ ಸಿಬಿಐಗೊಪ್ಪಿಸಲು ವಿವಿಧ ಸಂಘಟನೆಗಳ ಆಗ್ರಹ](https://etvbharatimages.akamaized.net/etvbharat/prod-images/768-512-3536377-thumbnail-3x2-shivu.jpg)
ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿರುವುದು
ವಿವಿಧ ಸಂಘಟನೆಗಳಿಂದ ಪ್ರತಿಭಟನೆ ನಡೆಸುತ್ತಿರುವುದು
ಬೆಳಗಾವಿ ಜಿಲ್ಲೆ ಅಥಣಿ ಪಟ್ಟಣದಲ್ಲಿ ನೂರಾರು ಪ್ರತಿಭಟನಾಕಾರರು ಪ್ರತಿಭಟನೆ ಮಾಡುತ್ತಿದ್ದು, ಅಥಣಿ ತಾಲೂಕಿನ ತಹಶೀಲ್ದಾರ್‌ರ ಮೂಲಕ ಪ್ರಧಾನಮಂತ್ರಿಗೆ ಮನವಿ ಸಲ್ಲಿಸಿದರು. ರಾಜ್ಯ ಸರ್ಕಾರದ ದುರ್ವರ್ತನೆಯನ್ನು ಖಂಡಿಸಿದರು.