ಬೆಳಗಾವಿ :ಧಾರವಾಡದ ಜಿಪಂ ಸದಸ್ಯ ಯೋಗೇಶ್ ಗೌಡ ಕೊಲೆ ಪ್ರಕರಣದಲ್ಲಿ ಹಿಂಡಲಗಾ ಜೈಲು ಪಾಲಾಗಿರುವ ಮಾಜಿ ಸಚಿವ ವಿನಯ ಕುಲಕರ್ಣಿ ಅವರನ್ನು ಪತ್ನಿ ಶಿವಲೀಲಾ ಹಾಗೂ ಅವರ ಸಹೋದರ ವಿಜಯ ಕುಲಕರ್ಣಿ ಭೇಟಿಯಾದರು.
ನಗರದ ಹಿಂಡಲಗಾ ಜೈಲಿಗೆ ಮಾಜಿ ಸಚಿವ ವಿನಯ ಕುಲಕರ್ಣಿಯವರನ್ನು 31ದಿನದ ಬಳಿಕ 2ನೇ ಬಾರಿಗೆ ಪತ್ನಿ ಶಿವಲೀಲಾ ಭೇಟಿಯಾದ್ರೆ, ಮೊದಲ ಬಾರಿಗೆ ಸಹೋದರ ವಿಜಯ ಕುಲಕರ್ಣಿ ಭೇಟಿಯಾದರು. ಸುಮಾರು 31 ದಿನಗಳ ಬಳಿಕ ಕುಟುಂಬಸ್ಥರನ್ನು ಕಂಡು ವಿನಯ್ ಭಾವುಕರಾದರು. ಈ ವೇಳೆ ಕುಟುಂಬಸ್ಥರು ತಾವು ತಂದಿದ್ದ ಆಹಾರವನ್ನು ನೀಡಿ ಯೋಗಕ್ಷೇಮ ವಿಚಾರಿಸಿದರು.
ಧಾರವಾಡ ಹೆಬ್ಬಳ್ಳಿ ಜಿಪಂ ಸದಸ್ಯ ಪ್ರಕರಣದಲ್ಲಿ ಜೈಲುಪಾಲಾಗಿರುವ ವಿನಯ ಕುಲಕರ್ಣಿಗೆ ಕಳೆದ ಡಿ.10ರಂದು ಕುಟುಂಬಸ್ಥರಿಗೆ ಭೇಟಿಯಾಗಲು ಕೋರ್ಟ್ ಅನುಮತಿ ನೀಡಿತ್ತು. ಅನುಮತಿ ಮೇರೆಗೆ ಕುಟುಂಬಸ್ಥರು ಒಂದು ತಿಂಗಳ ಬಳಿಕ ಭೇಟಿಯಾಗಿದ್ದಾರೆ. ಆದ್ರೆ, ಕೋರ್ಟ್ ಅನುಮತಿಯಲ್ಲಿ ಕೇವಲ ಇಬ್ಬರಿಗೆ ಮಾತ್ರ ಜೈಲಿನೊಳಗಡೆ ಪ್ರವೇಶ ನೀಡಲಾಗಿತ್ತು.