ಚಿಕ್ಕೋಡಿ: ಶಿವಸೇನೆ ಪುಂಡಾಟಿಕೆ ಮತ್ತೆ ಮುಂದುವರೆದಿದೆ, ಹೆದ್ದಾರಿಯಲ್ಲಿ ಕರ್ನಾಟಕದ ವಾಹನಗಳನ್ನು ತಡೆದು ಜೈ ಮಹಾರಾಷ್ಟ್ರ ಪೋಸ್ಟರ್ ಅಂಟಿಸಿ ವಿಕೃತಿ ಮೆರೆದಿದ್ದಾರೆ.
ಪುಣೆ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಶಿವಸೇನೆ ಗೂಂಡಾಗಳು ಕರ್ನಾಟಕದ ವಾಹನಗಳ ಮೇಲೆ ದಾಳಿ ಮಾಡಿ ಜಯ ಮಹಾರಾಷ್ಟ್ರ ಎಂಬ ಪೋಸ್ಟರ್ ಅಂಟಿಸುತ್ತಿದ್ದಾರೆ. ಪ್ರಶ್ನಿಸುವವರ ಬಳಿ ಗೂಂಡಾ ವರ್ತನೆ ತೋರುತ್ತಿದ್ದಾರೆ ಎನ್ನಲಾಗಿದೆ.