ಕರ್ನಾಟಕ

karnataka

ETV Bharat / state

ಖಾನಾಪುರ ಎಂಇಎಸ್ ಗಲಭೆ ಪ್ರಕರಣ: ಕೋರ್ಟ್‌ಗೆ ಹಾಜರಾದ ಶಿವಸೇನೆ ಮುಖಂಡ - ಶಿವಸೇನೆ ಮುಖಂಡ ಕೋರ್ಟ್‌ಗೆ ಹಾಜರು

ಖಾನಾಪುರ ಪಟ್ಟಣದಲ್ಲಿ ನಡೆದ ಗಲಭೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಶಿವಸೇನೆ ಮುಖಂಡ ನ್ಯಾಯಾಲಯಕ್ಕೆ ಹಾಜರಾಗಿದ್ದರು.

shiv-sena-leader-appears-in-court-in-khanapur-mes-riot-case
ಖಾನಾಪುರ ಎಂಇಎಸ್ ಗಲಭೆ ಪ್ರಕರಣ: ಶಿವಸೇನೆ ಮುಖಂಡ ಕೋರ್ಟ್‌ಗೆ ಹಾಜರು

By

Published : Oct 28, 2022, 7:15 AM IST

ಬೆಳಗಾವಿ:2006ರಲ್ಲಿ ಖಾನಾಪುರ ಪಟ್ಟಣದಲ್ಲಿ ಎಂಇಎಸ್ ಕಾರ್ಯಕರ್ತರಿಂದ ನಡೆದ ಗಲಭೆ ಪ್ರಕರಣ ಸಂಬಂಧ ಮಹಾರಾಷ್ಟ್ರದ ಶಿವಸೇನೆ ಮುಖಂಡರೊಬ್ಬರು ಖಾನಾಪುರ ಕೋರ್ಟ್‌ಗೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

2006ರ ಅಕ್ಟೋಬರ್ 26ರಂದು ಖಾನಾಪುರದ ತಾರಾರಾಣಿ ಪ್ರೌಢಶಾಲೆ ಮೈದಾನದಲ್ಲಿ ಎಂಇಎಸ್ ಯುವ ಮೇಳಾವ್​​ ಸಮಾವೇಶ ನಡೆದಿತ್ತು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವ ರಾಮದಾಸ್ ಕದಂ ಪ್ರಚೋದನಕಾರಿ ಭಾಷಣ ಮಾಡಿದ್ದರು. ಅಲ್ಲದೇ ಅಂದಿನ ಮುಖ್ಯಮಂತ್ರಿ ಹೆಚ್‌ಡಿ ಕುಮಾರಸ್ವಾಮಿ ಬಗ್ಗೆಯೂ ಅವಹೇಳನಕಾರಿ ಹೇಳಿಕೆ ನೀಡಿದ್ದರು. ರಾಮದಾಸ್ ಕದಂ ಭಾಷಣದ ಬಳಿಕ ಖಾನಾಪುರದಲ್ಲಿ ಎಂಇಎಸ್ ಕಾರ್ಯಕರ್ತರು ಪುಂಡಾಟ ಪ್ರದರ್ಶನ ಮಾಡಿದ್ದರು.

ಈ ವೇಳೆ ಮೈದಾನದಿಂದ ಹೊರಬಂದು ಸಿಕ್ಕಸಿಕ್ಕ ಕಡೆಗಳಲ್ಲಿ ಕಲ್ಲು ತೂರಾಟ ಮಾಡಲಾಗಿತ್ತು. ಪರಿಣಾಮ, 20 ಜನ ಪೊಲೀಸ್ ಸಿಬ್ಬಂದಿ ಸೇರಿ ಹಲವರಿಗೆ ಗಾಯವಾಗಿತ್ತು.‌ ಇದಲ್ಲದೇ ಬೆಳಗಾವಿಗೆ ತೆರಳುವ ಮಾರ್ಗದಲ್ಲಿ ಕರ್ನಾಟಕದ ಬಸ್‌ಗಳ ಮೇಲೆಯೂ ಕಲ್ಲು ತೂರಲಾಗಿತ್ತು. ಆ ಸಂದರ್ಭದಲ್ಲಿ ರಾಮದಾಸ್ ಕದಂ ವಿರುದ್ಧ ಖಾನಾಪೂರ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು‌.

ಸತಾರಾ ಕೃಷಿ ವಿಶ್ವವಿದ್ಯಾಲಯದ ಪ್ರೊ.ನಿತಿನ್ ಪಾಟೀಲ್ ಎಂಬುವರ ವಿರುದ್ಧವೂ ಖಾನಾಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 153, 153(ಎ)ರಡಿ ಕೇಸ್ ದಾಖಲಾಗಿತ್ತು. ಈ ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ರಾಮದಾಸ್ ಕದಂಗೆ ಖಾನಾಪುರ ಕೋರ್ಟ್ ನೋಟಿಸ್ ನೀಡಿತ್ತು. ಗುರುವಾರ ಮಹಾರಾಷ್ಟ್ರದಿಂದ ಆಗಮಿಸಿದ್ದ ರಾಮದಾಸ್ ಕದಂ ವಿಚಾರಣೆ ಎದುರಿಸಿದ್ದಾರೆ. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ನವೆಂಬರ್ 30ಕ್ಕೆ ಮುಂದೂಡಿದೆ.

ಇದನ್ನೂ ಓದಿ:ಮೃತ ಮಗನ ಪಾಲಿನ ಆಸ್ತಿಯಲ್ಲಿ ವಿಧವೆ ತಾಯಿಗೂ ಪಾಲು ನೀಡಬೇಕು: ಹೈಕೋರ್ಟ್

ABOUT THE AUTHOR

...view details