ಕರ್ನಾಟಕ

karnataka

ETV Bharat / state

ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ... ಮತ್ತೆ ಕ್ಯಾತೆ ತೆಗೆದ ಶಿವಸೇನೆ - Belgaum news

ಸದಾ ಕರ್ನಾಟಕ-ಮಹಾರಾಷ್ಟ್ರ ಗಡಿವಿವಾದ ಕುರಿತು ಕ್ಯಾತೆ ತೆಗೆದುಕೊಂಡಿದ್ದ ಶಿವಸೇನೆ ಈಗ ಮತ್ತೊಮ್ಮೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದಿದೆ. ಹೌದು, ಶಿವಸೇನೆ ಮುಖವಾಣಿಯಾದ ಸಾಮ್ನಾದಲ್ಲಿ ಗಡಿ ಕುರಿತಾಗಿ ಲೇಖನ ಒಂದನ್ನು ಪ್ರಕಟಿಸಿದೆ. ಅದು ಈಗ ಮತ್ತೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತಾಗಿದೆ.

Shiv Sena
ಶಿವಸೇನೆ

By

Published : Dec 28, 2019, 8:40 PM IST

ಬೆಳಗಾವಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿಚಾರವಾಗಿ ಶಿವಸೇನೆ ಮತ್ತೆ ಕ್ಯಾತೆ ತೆಗೆದಿದೆ. ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಶಿವಸೇನೆ ಮುಖವಾಣಿ ಸಾಮ್ನಾದಲ್ಲಿ ಲೇಖನ ಪ್ರಕಟಿಸಲಾಗಿದೆ.

ಕರ್ನಾಟಕ ನವನಿರ್ಮಾಣ ಸೇನೆ ಅಧ್ಯಕ್ಷ ಭೀಮಾಶಂಕರ ಹಾಗೂ ಬಿಜೆಪಿ ‌ಸರ್ಕಾರದ ವಿರುದ್ಧ ಲೇಖನ ಬರೆಯಲಾಗಿದೆ. ಬಿಜೆಪಿ ಅಧಿಕಾರವಿರುವ ರಾಜ್ಯಗಳಲ್ಲಿ ನ್ಯಾಯ ಕೇಳಿದ್ರೆ ಗುಂಡು ಬೀಳುತ್ತೆ. ಒಂದೆಡೆ ತಮ್ಮದು ಹಿಂದೂತ್ವ ಪಕ್ಷ ಎಂದು ಬಿಜೆಪಿ ಹೇಳಿಕೊಳ್ಳುತ್ತೆ. ಮತ್ತೊಂದೆಡೆ ಎಂಇಎಸ್ ನಾಯಕರನ್ನು ಗುಂಡಿಕ್ಕಿ ಎಂಬ ಹೇಳಿಕೆ‌ ಕನ್ನಡ ಸಂಘಟನೆ ನೀಡುತ್ತಿವೆ. ಮರಾಠಿ ಭಾಷಿಗರಲ್ಲೂ ಹಿಂದೂಗಳು ಇದ್ದಾರೆ.‌ ಬೆಳಗಾವಿ ಮಹಾನಗರ ಪಾಲಿಕೆ ಮೇಲೆ ಭಗವಾಧ್ವಜ ಹಾರಿಸಿದ್ರೆ ಕ್ರಮ ಕೈಗೊಳ್ತಾರೆ.‌ ಇದೇನಾ ನಿಮ್ಮ ಹಿಂದೂತ್ವ? ಅಂತಾ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಲೇಖನ ಬರೆಯಲಾಗಿದೆ.

ಸಾಮ್ನಾ ಪತ್ರಿಕೆಯಲ್ಲಿ ಬಿಡುಗಡೆಯಾದ ಲೇಖನ

ಕರ್ನಾಟಕ ‌ಗಡಿಭಾಗವನ್ನು ಮಹಾರಾಷ್ಟ್ರ ಸಿಎಂ ಉದ್ಧವ ಠಾಕ್ರೆ ಪಿಒಕೆಗೆ ಹೋಲಿಸಿದ್ದರು. ಬೆಳಗಾವಿ, ನಿಪ್ಪಾಣಿ, ಕಾರವಾರ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಮಹಾರಾಷ್ಟ್ರ ಸಿಎಂ ಹೇಳಿಕೆಯನ್ನು ಭೀಮಾಶಂಕರ ಪಾಟೀಲ್​​ ಖಂಡಿಸಿದ್ದರು. ಎಂಇಎಸ್ ನಾಯಕರನ್ನು ಗಡಿಯಲ್ಲಿ ನಿಲ್ಲಿಸಿ ಗುಂಡು‌ ಹಾಕಬೇಕು ಎಂದಿದ್ದರು. ಈ ಹೇಳಿಕೆಯನ್ನೇ ಪ್ರಸ್ತಾಪಿಸಿ ರಾಜ್ಯ ಬಿಜೆಪಿ ಸರ್ಕಾರ ವಿರುದ್ಧ ಸಾಮ್ನಾದಲ್ಲಿ ಲೇಖನ ಬರೆಯಲಾಗಿತ್ತು. ಶಿವಸೇನೆ ಪದೇ ಪದೆ ಗಡಿವಿವಾದ ಕೆಣಕುತ್ತಿದ್ದರೂ ರಾಜ್ಯ ಸರ್ಕಾರ ಮೌನವಾಗಿದ್ದು, ಕನ್ನಡ ಪರ ಸಂಘಟನೆಗಳಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ABOUT THE AUTHOR

...view details