ಕರ್ನಾಟಕ

karnataka

ETV Bharat / state

ಕೊರೊನಾ ಶಂಕಿತನ ಜತೆಗೆ 10 ಜನರ ಪ್ರಯಾಣ: ಬೆಳಗಾವಿಯಲ್ಲಿ ಊರಿಗೂರೇ ಖಾಲಿ - ಶಿಂಧಿಕುರಬೇಟ ಗ್ರಾಮಸ್ಥರು ಸಾಮೂಹಿಕ ಲಾಕ್​ಡೌನ್​​

ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧರ್ಮಸಭೆಗೆ ಬೆಳಗಾವಿಯ ಶಿಂಧಿಕುರಬೇಟ ಗ್ರಾಮದ 10 ಮಂದಿ ಭಾಗವಹಿಸಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಇಡೀ ಗ್ರಾಮವನ್ನೇ ಲಾಕ್​​ಡೌನ್​​ ಮಾಡಲಾಗಿದೆ.

shindikurabeta-village-lockdown-due-to-corona
ಶಿಂಧಿಕುರಬೇಟ ಗ್ರಾಮ ಲಾಕ್​​ಡೌನ್​​

By

Published : Apr 1, 2020, 3:01 PM IST

ಬೆಳಗಾವಿ: ದೆಹಲಿಯ ನಿಜಾಮುದ್ದೀನ್ ಜಮಾತ್ ಮಸೀದಿಯಲ್ಲಿ ನಡೆದ ಧರ್ಮಸಭೆಗೆ ಗ್ರಾಮದಿಂದ 10 ಜನ ತೆರಳಿದ್ದ ಪರಿಣಾಮ ಬೆಳಗಾವಿಯ ಆ ಒಂದು ಪುಟ್ಟ ಗ್ರಾಮ ಸಂಪೂರ್ಣ ಬಂದ್ ಆಗಿದೆ.

ಶಿಂಧಿಕುರಬೇಟ ಗ್ರಾಮ ಲಾಕ್​​ಡೌನ್​​

ಗೋಕಾಕ್ ತಾಲೂಕಿನ ಶಿಂಧಿಕುರಬೇಟ ಗ್ರಾಮವನ್ನು ಸಂಪೂರ್ಣ ಲಾಕ್​​​​ಡೌನ್ ಮಾಡಲಾಗಿದೆ. ದೆಹಲಿಯ ಜಮಾತ್‌ನಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಬಂದ ವ್ಯಕ್ತಿ ಜತೆಗೆ ಶಿಂಧಿಕುರಬೇಟ ಗ್ರಾಮದ 10 ಜನ‌ರು ಪ್ರಯಾಣಿಸಿದ ಮಾಹಿತಿ ಸಿಕ್ಕಿದೆ. ಶಿಂಧಿಕುರಬೇಟ ಗ್ರಾಮದ 10 ಜನರನ್ನು ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಸಾಮೂಹಿಕ ಕ್ವಾರಂಟೈನ್ ಮಾಡಲಾಗಿದೆ. ಗ್ರಾಮದ ಯುವಕರು ನಿನ್ನೆ ಮಧ್ಯರಾತ್ರಿ 1 ಗಂಟೆಯವರೆಗೆ ಡಂಗೂರ ಸಾರಿ ಊರಿಗೆ ಊರೇ ಮೌನಕ್ಕೆ ಶರಣಾಗಿದೆ.

ABOUT THE AUTHOR

...view details