ಕರ್ನಾಟಕ

karnataka

ETV Bharat / state

ಗಡಿ ಭಾಗದ ಜನರಿಗೆ ಕೋವಿಡ್​ ಸೆಂಟರ್​ ಆರಂಭಿಸಿದ ಜೊಲ್ಲೆ ದಂಪತಿ - ಕೋವಿಡ್ ಕೇರ್​ ಸೆಂಟರ್​

ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮಗಳಲ್ಲಿ ಹೆಚ್ಚಾಗಿ ಮಹಾರಾಷ್ಟ್ರದ ನಂಟು ಹೊಂದಿರುವ ಕಾರಣ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗಳು ಭರ್ತಿಯಾಗಿದ್ದು, ಗಡಿ ಜನರು‌ ಮಹಾರಾಷ್ಟ್ರದ ಆಸ್ಪತ್ರೆಗಳತ್ತ ಮುಖ ಮಾಡುವಂತಹ ಪ್ರಸಂಗ ಎದುರಾಗಿದೆ.

ಜೊಲ್ಲೆ ದಂಪತಿ
ಜೊಲ್ಲೆ ದಂಪತಿ

By

Published : May 24, 2021, 11:28 PM IST

Updated : May 24, 2021, 11:40 PM IST

ಚಿಕ್ಕೋಡಿ:ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿಯ ನಿಪ್ಪಾಣಿ ತಾಲೂಕಿನಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಸಚಿವೆ ಶಶಿಕಲಾ ಜೊಲ್ಲೆ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.

ಗಡಿ ಭಾಗದ ಜನರಿಗೆ ಕೋವಿಡ್​ ಸೆಂಟರ್​ ಆರಂಭಿಸಿದ ಜೊಲ್ಲೆ ದಂಪತಿ

ಕೊರೊನಾ ಸೋಂಕಿತ ಪ್ರಕರಣ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಶಿಶಿಕಲಾ ಜೊಲ್ಲೆ ಮತ್ತು ಚಿಕ್ಕೋಡಿ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇದೀಗ ನಿಪ್ಪಾಣಿ ತಾಲೂಕಿನ ಗಡಿ ಗ್ರಾಮವಾದ ಬೊರಗಾಂವ್​ ಮದರಸಾದಲ್ಲಿ 25 ಹಾಸಿಗೆಯ ಕೋವಿಡ್ ಕೇರ್ ಸೆಂಟರ್​ ಪ್ರಾರಂಭಿಸುವ ನಿರ್ಧಾರ ಕೈಗೊಂಡಿದ್ದಾರೆ. ಈ ಮೂಲಕ ಗಡಿ ಭಾಗದ ಜನರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಕರ್ನಾಟಕ-ಮಹಾರಾಷ್ಟ್ರದ ಗಡಿಯಲ್ಲಿರುವ ಗ್ರಾಮಗಳಲ್ಲಿ ಹೆಚ್ಚಾಗಿ ಮಹಾರಾಷ್ಟ್ರದ ನಂಟು ಹೊಂದಿರುವ ಕಾರಣ ಕೊರೊನಾ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಸ್ಥಳೀಯ ಖಾಸಗಿ ಆಸ್ಪತ್ರೆಗಳು ಭರ್ತಿಯಾಗಿದ್ದು, ಗಡಿ ಜನರು‌ ಮಹಾರಾಷ್ಟ್ರದ ಆಸ್ಪತ್ರೆಗಳತ್ತ ಮುಖ ಮಾಡುವಂತಹ ಪ್ರಸಂಗ ಎದುರಾಗಿದೆ.

ಈ ಹಿನ್ನಲೆಯಲ್ಲಿ ಗಡಿ ಭಾಗದ ಜನರಿಗೆ ಅನಕೂಲವಾಗುವ ದೃಷ್ಟಿಯಿಂದ ಗಡಿಯಲ್ಲಿ ಕೊವೀಡ್ ಕೇರ್ ಸೆಂಟರ್​ ಪ್ರಾರಂಭಿಸುವುದರ ಮೂಲಕ ಅಲ್ಲಿನ ಜನರಿಗೆ ಅನಕೂಲ ಮಾಡಿಕೊಟ್ಟಿದ್ದಾರೆ. ಬೋರಗಾಂವ​ ಮದರಸಾದಲ್ಲಿ ಆಕ್ಸಿಜನ್​ ವ್ಯವಸ್ಥೆ ಕಲ್ಪಿಸಿದ್ದು, ಮಹಾರಾಷ್ಟ್ರದ ಆಸ್ಪತ್ರೆಗಳ ಮೇಲೆ ಅವಲಂಭಿತವಾಗಿದ್ದ ಗಡಿ ಜನತೆಗೆ ಇದರಿಂದ ಸಹಾಯವಾಗಿದೆ.

Last Updated : May 24, 2021, 11:40 PM IST

ABOUT THE AUTHOR

...view details