ಚಿಕ್ಕೋಡಿ: ಹುಕ್ಕೇರಿ ತಾಲೂಕಿನ ದಡ್ಡಿ-ಸಮಲಾವಾಡಿ ಗ್ರಾಮಗಳ ಮನೆ, ಅಂಚೆ ಕಚೇರಿ, ಹಾರ್ಡ್‌ವೇರ್ ಅಂಗಡಿಗಳು ಸೇರಿದಂತೆ ಹಲವೆಡೆ ಕಡೆ ಸರಣಿ ಕಳ್ಳತನ ನಡೆದಿದೆ.
ದಡ್ಡಿ ಗ್ರಾಮದ ವಿಲಾಸ ರಾಮಪ್ಪ ಮಡಲಗಿ ಎಂಬುವರ ಅಂಗಡಿಯಲ್ಲಿ 8 ಸಾವಿರ ನಗದು, ರವೀಂದ್ರ ಮನೋಹರ ಮುಳಕಿ ಹಾರ್ಡ್‌ವೇರ್ ಅಂಗಡಿಯಲ್ಲಿ 8 ಸಾವಿರ, ನಿಲೇಶ ಬಾಂದುಗೆರ್ ಮೆಡಿಕಲ್ ಸ್ಟೋರ್ನಲ್ಲಿ 7 ಸಾವಿರ ರೂಪಾಯಿ ನಗದು ಕಳ್ಳತನವಾಗಿದೆ.
ದಡ್ಡಿ-ಸಮಲಾವಾಡಿಯಲ್ಲಿ ಸರಣಿ ಕಳ್ಳತನ ಸಮಲಾವಾಡಿ ಗ್ರಾಮದಲ್ಲಿ ಅಂಚೆ ಕಚೇರಿಯ ಸೇಫ್ ಲಾಕರ್ ತೆರೆಯಲು ಸಹ ಯತ್ನಿಸಲಾಗಿದೆ. ಗ್ರಾಮದ ಅರ್ಜುನ ಸಾವಂತ, ವಸಂತ ಸಾವಂತ, ಅರ್ಜುನ ಸುತಾರ ಅವರ ಮನೆಯ ಬೀಗ ಮುರಿಯಲಾಗಿದೆ, ಆದರೆ ಅವರ ಮನೆಗಳಲ್ಲಿ ಏನು ಸಿಕ್ಕಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.
ಸ್ಥಳಕ್ಕೆ ಹುಕ್ಕೇರಿ ಸಿಪಿಐ, ಯಮಕನಮರಡಿ ಪಿಎಸ್ಐ ಹಾಗೂ ಶ್ವಾನದಳ ತಂಡ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ಕುರಿತು ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.