ಬೆಳಗಾವಿ:ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವಿವಿಧ ಸ್ಥಾಯಿ ಸಮಿತಿಗಳಿಗೆ ನೂತನ ಸದಸ್ಯರ ಆಯ್ಕೆ ಸಂಬಂಧ ಇಂದು ಚುನಾವಣೆ ನಿಗದಿಯಾಗಿತ್ತು. ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಜಿ.ಪಂ ಅಧ್ಯಕ್ಷೆ ಆಶಾ ಐಹೊಳೆ, ಎಂಎಲ್‍ಸಿ ಪ್ರೊ.ಸಾಬಣ್ಣ ತಳವಾರ ಉಪಸ್ಥಿತಿಯಲ್ಲಿ ವಿವಿಧ ಸ್ಥಾಯಿ ಸಮಿತಿಗಳಿಗೆ ಸದಸ್ಯರ ಆಯ್ಕೆ ನಡೆಸಲಾಯಿತು.
ಉಪಕಾರ್ಯದರ್ಶಿ ಎಸ್.ಬಿ.ಮುಳ್ಳಳ್ಳಿ ಅವರು ನೂತನವಾಗಿ ಆಯ್ಕೆಯಾದ ಸ್ಥಾಯಿ ಸಮಿತಿ ಸದಸ್ಯರ ಹೆಸರುಗಳನ್ನು ಘೋಷಣೆ ಮಾಡಿದರು. ಈ ವೇಳೆ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಖುದ್ದಾಗಿ ತಾವೇ ಆಗಮಿಸಿ ವಿವಿಧ ಸ್ಥಾಯಿ ಸಮಿತಿಗೆ ಸದಸ್ಯರನ್ನು ಅವಿರೋಧವಾಗಿ ಆಯ್ಕೆ ಮಾಡಿದ್ದು ಕಂಡು ಬಂತು. ಇನ್ನು ಮಾಜಿ ಶಾಸಕ ಸಂಜಯ್ ಪಾಟೀಲ್ ಚುನಾವಣಾ ಸಭಾಗೃಹದಲ್ಲಿ ಕಾಣಿಸಿಕೊಂಡಿದ್ದಕ್ಕೆ ಕೆಲ ಜಿಪಂ ಸದಸ್ಯರು ಒಳಗೊಳಗೆ ಅಸಮಾಧಾನ ವ್ಯಕ್ತಪಡಿಸಿದರು. ಮಾಜಿ ಶಾಸಕರಿಗೆ ಇಲ್ಲೇನು ಕೆಲಸ ಎಂಬ ಮಾತು ಕೇಳಿ ಬಂದವು.
ಬೆಳಗಾವಿ ಜಿಪಂ ಸ್ಥಾಯಿ ಸಮಿತಿಗೆ ಆಯ್ಕೆಯಾದ ಸದಸ್ಯರು ಹಾಗೂ ಅಧ್ಯಕ್ಷರ ಮಾಹಿತಿ:
ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ
1) ನಿಂಗಪ್ಪ ರಾಮಪ್ಪ ಪಕಾಂಡೇ (ಅಧ್ಯಕ್ಷ)
2) ಅಜಿತ್ ಕೃಷ್ಣರಾವ್ ದೇಸಾಯಿ
3) ಸುಮನ್ ಮಡಿವಾಳಪ್ಪ ಪಾಟೀಲ್
4) ಮಾಧುರಿ ಬಾಬಾಸಾಹೇಬ್ ಶಿಂದೆ
5) ಲಾವಣ್ಯ ಶಾಮಸುಂದರ ಶಿಲೇದಾರ
6) ಮೀನಾಕ್ಷಿ ಸುಧೀರ್ ಜೋಡಟ್ಟಿ
7) ನಿಂಗಪ್ಪ ಅರಕೇರಿ
ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ
1) ಸಿದ್ದಪ್ಪ ಮುದಕನ್ನವರ್ (ಅಧ್ಯಕ್ಷ)
2) ಸುರೇಖಾ ನಾಯಕ
3) ಲಕ್ಷ್ಮಿ ಕುರುಬರ
4) ಬಸವರಾಜ್ ಬಂಡಿವಡ್ಡರ್
5) ಮಲ್ಲಪ್ಪ ಹಿರೇಕುಂಬಿ
6) ಪವಾರ್ ರಾಮಪ್ಪ
7) ಶಶಿಕಲಾ ಸಣ್ಣಕ್ಕಿ
ಹಣಕಾಸು ಲೆಕ್ಕಪರಿಶೋಧನೆ ಮತ್ತು ಯೋಜನಾ ಸ್ಥಾಯಿ ಸಮಿತಿ
1) ಆಶಾ ಪ್ರಶಾಂತ್ ಐಹೊಳೆ (ಅಧ್ಯಕ್ಷೆ)