ಅಥಣಿ:ತಾಲೂಕಿನ ಹಲ್ಯಾಳ ಗ್ರಾಮದ ಸಮೀಪ ಕೃಷ್ಣಾ ನದಿ ಪಾಲಾಗಿರುವ ನಾಲ್ವರು ಸಹೋದರರ ಶೋಧಕಾರ್ಯ ಎರಡನೇ ದಿನವೂ ಮುಂದುವರೆದಿದೆ. ಎನ್.ಡಿ.ಆರ್.ಎಫ್ ಹಾಗೂ ಸ್ಕೂಬಾ ಡೈವಿಂಗ್ ತಂಡ ಜಂಟಿಯಾಗಿ ನದಿಯಲ್ಲಿ ಶೋಧಕಾರ್ಯ ನಡೆಸುತ್ತಿವೆ.
ಕೃಷ್ಣಾ ನದಿ ಪಾಲಾದ ನಾಲ್ವರು ಸಹೋದರರು: ಶೋಧ ಕಾರ್ಯಕ್ಕೆ ಸ್ಕೂಬಾ ಡೈವಿಂಗ್ ತಂಡ ಸಾಥ್ - ಅಥಣಿಯ ಹಲ್ಯಾಳ
ಅಥಣಿಯ ಹಲ್ಯಾಳ ಬಳಿ ನದಿಗೆ ಬಿದ್ದು ನಾಪತ್ತೆಯಾಗಿರುವ ಸಹೋದರರ ಶೋಧ ಕಾರ್ಯ ಮುಂದುವರೆದಿದೆ. ಎನ್ಡಿಆರ್ಎಫ್, ಅಗ್ನಿಶಾಮಕ, ಸ್ಕೂಬಾ ಡೈವಿಂಗ್ ತಂಡ ಜಂಟಿ ಕಾರ್ಯಾಚರಣೆ ನಡೆಸುತ್ತಿವೆ.
![ಕೃಷ್ಣಾ ನದಿ ಪಾಲಾದ ನಾಲ್ವರು ಸಹೋದರರು: ಶೋಧ ಕಾರ್ಯಕ್ಕೆ ಸ್ಕೂಬಾ ಡೈವಿಂಗ್ ತಂಡ ಸಾಥ್ Brothers fell down in Krishna River](https://etvbharatimages.akamaized.net/etvbharat/prod-images/768-512-12297025-thumbnail-3x2-hrs.jpg)
ಮುಂದುವರೆದ ಶೋಧ ಕಾರ್ಯ
ಮುಂದುವರೆದ ಶೋಧ ಕಾರ್ಯ
ಬೆಳಗಾವಿ ಜಿಲ್ಲಾಡಳಿತದ ಮನವಿ ಮೇರೆಗೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲಾಧಿಕಾರಿ ಸ್ಕೂಬಾ ಡೈವಿಂಗ್ ತಂಡವನ್ನು ಕಳುಹಿಸಿ ಕೊಟ್ಟಿದ್ದಾರೆ. ಚಿಕ್ಕೋಡಿ ಉಪವಿಭಾಗಾಧಿಕಾರಿ ಯಕೇಶ್ ಕುಮಾರ್, ಅಥಣಿ ತಹಶೀಲ್ದಾರ್ ದುಂಡಪ್ಪ ಕೋಮಾರ, ಡಿವೈಎಸ್ಪಿ ಎಸ್.ವಿ ಗಿರೀಶ್ ಹಾಗೂ ಇತರೆ ಅಧಿಕಾರಿಗಳು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಎನ್ಡಿಆರ್ಎಫ್ ತಂಡಕ್ಕೆ ಸ್ಥಳೀಯ ಅಗ್ನಿಶಾಮಕ ಸಿಬ್ಬಂದಿ ಸಾಥ್ ನೀಡಿದ್ದಾರೆ.