ಕರ್ನಾಟಕ

karnataka

ETV Bharat / state

ಎಸ್​ಸಿಎಸ್​ಪಿ - ಟಿಎಸ್​ಪಿ ಅನುದಾನ ಅನ್ಯ ಉದ್ದೇಶಕ್ಕೆ ಬಳಸದಂತೆ ನಿಯಂತ್ರಿಸುವ ತಿದ್ದುಪಡಿ ವಿಧೇಯಕ ಮಂಡನೆ - ಡಿ ಕೆ ಶಿವಕುಮಾರ್

ಎಸ್​ಸಿಎಸ್​ಪಿ ಮತ್ತು ಟಿಎಸ್​ಪಿ ಅನುದಾನ ನಿಯಂತ್ರಿಸುವ ತಿದ್ದುಪಡಿ ವಿಧೇಯಕವನ್ನು ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಮಂಡಿಸಿದರು.

ವಿಧಾನಸಭೆ
ವಿಧಾನಸಭೆ

By ETV Bharat Karnataka Team

Published : Dec 11, 2023, 10:57 PM IST

ಬೆಳಗಾವಿ : ಪರಿಶಿಷ್ಟ ಜಾತಿ ಉಪ ಯೋಜನೆ (ಎಸ್‌ಸಿಎಸ್‌ಪಿ) ಮತ್ತು ಪರಿಶಿಷ್ಟ ಪಂಗಡಗಳ ಉಪಯೋಜನೆಯ (ಟಿಎಸ್‌ಪಿ) ಅನುದಾನವನ್ನು ಗ್ಯಾರಂಟಿಗೆ ಬಳಕೆಗೆ ಮಾಡಿದ್ದ ಕಾಂಗ್ರೆಸ್ ಸರ್ಕಾರ, ಇನ್ನು ಮುಂದೆ ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸದಂತೆ ಕಡಿವಾಣ ಹಾಕುವ ತಿದ್ದುಪಡಿ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡನೆ ಮಾಡಿದೆ.

ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ಕರ್ನಾಟಕ ಅನುಸೂಚಿತ ಜಾತಿಗಳ ಉಪಹಂಚಿಕೆ ಮತ್ತು ಬುಡಕಟ್ಟು ಉಪಹಂಚಿಕೆ( ಹಂಚಿಕೆ ಮಾಡಬಹುದಾದ ಆಯವ್ಯಯ ರೂಪಿಸುವುದು, ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ) (ತಿದ್ದುಪಡಿ) ವಿಧೇಯಕ ಮಂಡಿಸಿದರು.
ಇತ್ತೀಚೆಗೆ ಸರಕಾರ ಗ್ಯಾರೆಂಟಿ ಯೋಜನೆಗೆ ಎಸ್‌ಸಿಎಸ್​ಪಿ- ಟಿಎಸ್‌ಪಿ ಅನುದಾನದ ಸಾವಿರಾರು ಕೋಟಿ ರೂ. ಗಳನ್ನು ಗ್ಯಾರಂಟಿ ಯೋಜನೆಗೆ ಬಳಿಸಿಕೊಂಡಿತ್ತು. ಈ ವಿಧೇಯಕದ ಅನ್ವಯ ಎಸ್‌ಸಿಎಸ್​ಪಿ- ಟಿಎಸ್‌ಪಿ ಅನುದಾನ ಬಳಕೆಗೆ ಅವಕಾಶ ಕಲ್ಪಿಸಲಿದೆ.

ಉಪಮುಖ್ಯಮಂತ್ರಿ ಮತ್ತು ಬುಡಕಟ್ಟು ಕಲ್ಯಾಣ ಮಂತ್ರಿ ಅವರನ್ನು ರಾಜ್ಯ ಅನುಸೂಚಿತ ಜಾತಿಗಳು ಅಥವಾ ಅನುಸೂಚಿತ ಪಂಗಡಗಳ ಅಭಿವೃದ್ಧಿ ಪರಿಷತ್ತಿಗೆ ಸೇರಿಸಲು ಮತ್ತು ಬುಡಕಟ್ಟು ಕಲ್ಯಾಣ ಮಂತ್ರಿಯನ್ನು ಅನುಸೂಚಿತ ಜಾತಿಗಳ ಉಪಹಂಚಿಕೆ ನೋಡಲ್ ಏಜೆನ್ಸಿ ಉಪಾಧ್ಯಕ್ಷರಾಗಿ ಸೇರಿಸಲು ಅವಕಾಶ ವಿಧೇಯಕದಲ್ಲಿ ಕಲ್ಪಿಸಲಾಗಿದೆ.

ಕರ್ನಾಟಕ ಅನುಸೂಚಿತ ಜಾತಿ ಮತ್ತು ಬುಡಕಟ್ಟು ಉಪ ಯೋಜನೆ (ಯೋಜನೆ, ಹಂಚಿಕೆ, ಮತ್ತು ಆರ್ಥಿಕ ಸಂಪನ್ಮೂಲಗಳ ಬಳಕೆ) ಕಾಯ್ದೆ–2013ರ ಅನ್ವಯ, ಬಜೆಟ್‌ನ ಒಟ್ಟು ಮೊತ್ತದ ಶೇ 24.1ರಷ್ಟನ್ನು ಪರಿಶಿಷ್ಟ ಸಮುದಾಯದ ಹಿತಕ್ಕೆ ಬಳಸುವುದು ಕಡ್ಡಾಯ. ಈ ಕಾಯ್ದೆಯ ‘ಸೆಕ್ಷನ್ 7 ಡಿ’ ಬಳಸಿಕೊಂಡು ಅನುದಾನವನ್ನು ಅನ್ಯ ಉದ್ದೇಶಕ್ಕೆ ಬಳಸಬಹುದಾದ ಅವಕಾಶ ಇತ್ತು. ಈ ತಿದ್ದುಪಡಿ ವಿಧೇಯಕದಲ್ಲಿ ಸೆಕ್ಷನ್ 7 ರದ್ದು ಪಡಿಸಲಾಗಿದೆ. ಆ ಮೂಲಕ ಅನ್ಯ ಉದ್ದೇಶಕ್ಕೆ ಎಸ್​ಸಿ, ಎಸ್ ಟಿ ಅನುದಾನವನ್ನು ಬಳಸುವ ಹಾಗಿಲ್ಲ.

ನೆಲಬಾಡಿಗೆ ಅನುಕೂಲವಾಗುವ ವಿಧೇಯಕ ಮಂಡನೆ:ಮತ್ತೊಂದೆಡೆಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಟ್ಟಡ ಕಟ್ಟಲು ಪಾಲಿಕೆಗೆ ನೆಲಬಾಡಿಗೆ ತೆರಿಗೆ ನೀಡಲು ಅನುಕೂಲವಾಗುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಕೆಲವು ಇತರ ಕಾನೂನು (ತಿದ್ದುಪಡಿ) ವಿಧೇಯಕ ಮಂಡಿಸಲಾಯಿತು.

ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರು ವಿಧೇಯಕ ಮಂಡಿಸಿದರು. ಪಾಲಿಕೆ ವ್ಯಾಪ್ತಿಯಲ್ಲಿ ಮನೆ ಕಟ್ಟಲು ರಸ್ತೆ ಮೇಲೆ ಹಾಕುವ ವಸ್ತುಗಳ ಮೇಲೆ ತೆರಿಗೆ ಹಾಕಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಮಾರ್ಗಸೂಚಿ ಮೌಲ್ಯದಲ್ಲಿ ಪರಿಶೀಲನಾ ಶುಲ್ಕ ನೀಡಬೇಕಿದೆ. ಕಟ್ಟಡ ಪರವಾನಗಿ ಶುಲ್ಕ, ಪ್ರಾರಂಭಿಕ ಪ್ರಮಾಣ ಪತ್ರಕ್ಕಾಗಿ ಶುಲ್ಕ ವಿಧಿಸುವ ಅವಕಾಶವನ್ನು ಈ ವಿಧೇಯಕ ಕಲ್ಪಿಸಲಿದೆ.

ಇದನ್ನೂ ಓದಿ :ವಕೀಲರ ಸಂರಕ್ಷಣಾ ವಿಧೇಯಕ ಮಂಡನೆ: ವಕೀಲರ ಮೇಲೆ ಹಲ್ಲೆ ಮಾಡಿದವರಿಗೆ ಗರಿಷ್ಠ 3 ವರ್ಷ ಶಿಕ್ಷೆ, 1 ಲಕ್ಷ ದಂಡ

ABOUT THE AUTHOR

...view details