ಕರ್ನಾಟಕ

karnataka

ETV Bharat / state

ಜೈನ ಮಹಾ ಸಂತ ಚಿನ್ಮಯಸಾಗರ ಮುನಿ ಮಹಾರಾಜರ ಆಶೀರ್ವಾದ ಪಡೆದ ಡಿಸಿಎಂ ಸವದಿ - ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ

ರಾಷ್ಟ್ರ ಸಂತ ಚಿನ್ಮಯಸಾಗರ ಮುನಿ ಮಹಾರಾಜರ ಸ್ಮಾರಕ ನಿರ್ಮಿಸುವ ನಿರ್ಧಾರಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ

By

Published : Oct 14, 2019, 8:39 AM IST

ಚಿಕ್ಕೋಡಿ:ರಾಷ್ಟ್ರಸಂತ ಚಿನ್ಮಯಸಾಗರ ಮುನಿ ಮಹಾರಾಜರ ಸ್ಮಾರಕ ನಿರ್ಮಿಸುವ ನಿರ್ಧಾರಕ್ಕೆ ಸರ್ಕಾರ ಆರ್ಥಿಕ ನೆರವು ನೀಡಲಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದರು.

ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ಜೈನ ಸಮಾಜದ ಸಂತ ಚಿನ್ಮಯಸಾಗರ ಮಹಾರಾಜರು ಅವರ ತವರೂರಾದ ಜುಗುಳ ಗ್ರಾಮದಲ್ಲಿ ಅಂತಿಮ ಘಟ್ಟದ ಯಮಸಲ್ಲೇಖನ ವ್ರತ ಸ್ವೀಕರಿಸಿದ್ದಾರೆ. ಅವರ ದರ್ಶನ ಪಡೆಯಲು ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಆಗಮಿಸಿದ್ದರು.

ಮುನಿ ಮಹಾರಾಜರು ತಮ್ಮ ಜೀವನದುದ್ದಕ್ಕೂ ಅಹಿಂಸಾ ತತ್ವಗಳನ್ನು ಸಾರಿ ಹೇಳುತ್ತಾ ದುಷ್ಟ ಚಟಗಳಿಗೆ ಅಂಟಿಕೊಂಡ ಅನೇಕರಿಗೆ ಬೋಧನೆ ಮಾಡಿ, ಅದರಿಂದ ಮುಕ್ತಗೊಳಿಸಿದ್ದಾರೆ. ಸರ್ಕಾರ ಈ ಸೇವೆ ಕಂಡು ಡಾಕ್ಟರೇಟ್ ಪದವಿ ನೀಡಿದೆ. ಅವರು ಒಬ್ಬ ಮಹಾನ್ ಸಂತ ಎಂದು ಸವದಿ ಹೇಳಿದರು.

ರಾಜ್ಯಸಭಾ ಸದಸ್ಯ ಡಾ. ಪ್ರಭಾಕರ ಕೋರೆ ಸ್ವಾಮಿಗಳಿಂದ ದರ್ಶನ ಪಡೆದುಕೊಂಡರು. ಅವರೊಂದಿಗೆ ಅನರ್ಹ ಶಾಸಕ ಮಹೇಶ್​ ಕುಮಟಳ್ಳಿ, ಕೆಪಿಸಿ ಸದಸ್ಯ ಕಿರಣಕುಮಾರ ಪಾಟೀಲ, ಅರಿಹಂತ ಉದ್ಯೋಗ ಸಮುಹ ಮುಖ್ಯಸ್ಥ ಉತ್ತಮ್ ಪಾಟೀಲ್ ಸೇರಿದಂತೆ ಅನೇಕರು ಚಿನ್ಮಯಸಾಗರ ಮುನಿ ಮಹಾರಾಜರ ದರ್ಶನ ಪಡೆದುದುಕೊಂಡರು.

ABOUT THE AUTHOR

...view details