ಬೆಳಗಾವಿ: ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಮತ್ತೊಂದು ಅವಧಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಕಿತ್ತೂರು ಶಾಸಕರೂ ಆಗಿರುವ ಮಹಾಂತೇಶ ದೊಡ್ಡಗೌಡರ ಅವಿರೋಧ ಆಯ್ಕೆ ಆಗಿದ್ದಾರೆ.
ಮತ್ತೊಂದು ಅವಧಿಗೆ ಬೆಳಗಾವಿ ಡಿಸಿಸಿ ಬ್ಯಾಂಕ್ ಮೆಟ್ಟಿಲೇರಿದ ಡಿಸಿಎಂ ಸವದಿ ಆಪ್ತ - DCM Savadi closure selected for DCC Bank in Belgaum
ಡಿಸಿಸಿ ಬ್ಯಾಂಕ್ ನಿರ್ದೇಶಕರ ಚುನಾವಣೆಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಆಪ್ತ ಮತ್ತೊಂದು ಅವಧಿಗೆ ಅವಿರೋಧ ಆಯ್ಕೆಯಾಗಿದ್ದಾರೆ. ಬೈಲಹೊಂಗಲ ತಾಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಮಹಾಂತೇಶ ದೊಡ್ಡನಗೌಡರ ಆಯ್ಕೆ ಆಗಿದ್ದಾರೆ.
ಬೈಲಹೊಂಗಲ ತಾಲೂಕಿನಿಂದ ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಅವಿರೋಧವಾಗಿ ಮಹಾಂತೇಶ ದೊಡ್ಡನಗೌಡರ ಆಯ್ಕೆ ಆಗಿದ್ದಾರೆ. ಬೈಲಹೊಂಗಲದಿಂದ ನಾಮಪತ್ರ ಸಲ್ಲಿಸಿದ್ದ ಬಸನಗೌಡ ಪಾಟೀಲ ನಾಮಪತ್ರ ಹಿಂಪಡೆದರು. ಬಸವನಗೌಡರನ್ನು ಮನವೊಲಿಸುವಲ್ಲಿ ಡಿಸಿಎಂ ಲಕ್ಷ್ಮಣ ಸವದಿ, ಸಚಿವ ರಮೇಶ್ ಜಾರಕಿಹೊಳಿ ಯಶಸ್ವಿಯಾಗಿದ್ದಾರೆ.
ಕಮಲ ನಾಯಕರ ಸಲಹೆ ಮೇರೆಗೆ ಬಸವನಗೌಡ ನಾಮಪತ್ರ ಹಿಂಪಡೆದರು. ಜಿಲ್ಲೆಯ ಕಮಲ ನಾಯಕರಿಗೆ ಮೂರು ಕ್ಷೇತ್ರಗಳು ಕಗ್ಗಂಟಾಗಿ ಉಳಿದಿವೆ. ರಾಮದುರ್ಗ, ಖಾನಾಪುರ ಹಾಗೂ ಉಣ್ಣೆ ಉತ್ಪಾದಕರ ಸಹಕಾರಿ ಮಂಡಳಿ ಸ್ಥಾನಗಳು ಅವಿರೋಧ ಆಯ್ಕೆ ಅಸಾಧ್ಯವಾಗಿದೆ. ಈ ಮೂರು ಕ್ಷೇತ್ರಗಳಿಗೆ ಚುನಾವಣೆ ನಡೆಯುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.