ಕರ್ನಾಟಕ

karnataka

ETV Bharat / state

ಇನ್ನೊಂದು ತಿಂಗಳು ರೇಣುಕಾದೇವಿ, ಚಿಂಚಲಿ ಮಾಯಕ್ಕನ ದರ್ಶನಕ್ಕಿಲ್ಲ ಅವಕಾಶ! - Belagavi news

ಸವದತ್ತಿಯ ಯಲ್ಲಮ್ಮಗುಡ್ಡದ ರೇಣುಕಾದೇವಿ ದೇವಸ್ಥಾನ ಸೇರಿ ಜಿಲ್ಲೆಯ 3 ದೇವಸ್ಥಾನಗಳನ್ನು ಒಂದು ತಿಂಗಳು ಬಂದ್ ಮಾಡಿ ಬೆಳಗಾಬಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

Yallamma devi
Yallamma devi

By

Published : Sep 1, 2020, 11:34 AM IST

ಬೆಳಗಾವಿ:ಉತ್ತರ ಕರ್ನಾಟಕದ ಶಕ್ತಿ ಕೇಂದ್ರ ಸವದತ್ತಿ‌ ರೇಣುಕಾದೇವಿ ದೇವಸ್ಥಾನ ಇನ್ನೂ ಒಂದು ತಿಂಗಳು ಬಂದ್ ಇರಲಿದೆ. ಸೆ.30 ರವರೆಗೆ ಭಕ್ತರ ಪ್ರವೇಶಕ್ಕೆ ಅವಕಾಶ ನಿರಾಕರಿಸಲಾಗಿದೆ.

ಸವದತ್ತಿಯ ಯಲ್ಲಮ್ಮಗುಡ್ಡದ ರೇಣುಕಾದೇವಿ ದೇವಸ್ಥಾನ ಸೇರಿ ಜಿಲ್ಲೆಯ 3 ದೇವಸ್ಥಾನಗಳನ್ನು ಒಂದು ತಿಂಗಳು ಬಂದ್ ಮಾಡಿ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆದೇಶ ಹೊರಡಿಸಿದ್ದಾರೆ.

ಸವದತ್ತಿಯ ರೇಣುಕಾ ಯಲ್ಲಮ್ಮದೇವಿ ದೇವಸ್ಥಾನ, ಜೋಗುಳಬಾವಿ ಸತ್ತೆಮ್ಮದೇವಿ, ಚಿಂಚಲಿ ಮಾಯಕ್ಕಾದೇವಿ ದೇವಸ್ಥಾನ ಬಂದ್ ಆಗಿರಲಿವೆ.

ರಾಯಬಾಗ ತಾಲೂಕಿನ ಚಿಂಚಲಿ ಮಾಯಕ್ಕಾದೇವಿ ದೇಗುಲ ಸೆಪ್ಟೆಂಬರ್ 30ರವರೆಗೆ ಸಾರ್ವಜನಿಕ ದರ್ಶನ ನಿಷೇಧಿಸಲಾಗಿದೆ. ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಈ ಮೂರು ದೇವಸ್ಥಾನಗಳು ಮಾರ್ಚ್ 18ರಿಂದ ಬಂದ್ ಆಗಿವೆ.

ABOUT THE AUTHOR

...view details