ಬೆಳಗಾವಿ :ಉತ್ತರ ಕರ್ನಾಟಕದ ಶ್ರದ್ಧಾ ಕೇಂದ್ರ ಬೆಳಗಾವಿ ಜಿಲ್ಲೆಯ ಸವದತ್ತಿಯ ಶ್ರೀ ರೇಣುಕಾದೇವಿ ಯಲ್ಲಮ್ಮನ ದೇವಸ್ಥಾನಕ್ಕೆ ಭಕ್ತಸಾಗರವೇ ಹರಿದು ಬರುತ್ತಿದೆ.
ಕೋವಿಡ್ ಹಿನ್ನೆಲೆ ಸವದತ್ತಿಯ ಶ್ರೀ ರೇಣುಕಾದೇವಿ ದೇಗುಲ ಸೇರಿ ಜಿಲ್ಲೆಯ 9 ದೇವಸ್ಥಾನಗಳ ಒಳಗೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಿ, ಜಿಲ್ಲಾಧಿಕಾರಿ ಎಂ ಜಿ ಹಿರೇಮಠ ಆದೇಶ ಹೊರಡಿಸಿದ್ದಾರೆ. ಆದ್ರೂ ದೇಗುಲಕ್ಕಿಂದು ಭಕ್ತ ಸಾಗರವೇ ಹರಿದು ಬಂದಿದೆ.
ಶ್ರೀ ಯಲ್ಲಮ್ಮನ ಗುಡ್ಡಕ್ಕೆ ಹರಿದು ಬರುತ್ತಿದೆ ಭಕ್ತಸಾಗರ ದೇವಸ್ಥಾನ ಆವರಣದಲ್ಲಿ ಕೋವಿಡ್ ನಿಯಮ ಉಲ್ಲಂಘಿಸಿ ಭಕ್ತರು ಜಾತ್ರೆ ಮಾಡುತ್ತಿದ್ದಾರೆ. ಮಾಸ್ಕ್, ದೈಹಿಕ ಅಂತರ ಮರೆತು ಭಕ್ತರು ಒಂದೇ ಕಡೆ ಜಮಾವಣೆಗೊಂಡಿದ್ದಾರೆ. ದೇವಸ್ಥಾನ ಆವರಣದಲ್ಲಿರುವ ಅಂಗಡಿ-ಮುಂಗಟ್ಟುಗಳನ್ನ ಬಂದ್ ಮಾಡುವಂತೆ ಜಿಲ್ಲಾಡಳಿತ ಆದೇಶ ಹೊರಡಿಸಿದೆ.
ಇದನ್ನೂ ಓದಿ: ಸವದತ್ತಿ ರೇಣುಕಾ ಯಲ್ಲಮ್ಮ ದೇವಿ ದೇಗುಲದ ಹುಂಡಿಯಲ್ಲಿ ₹1.18 ಕೋಟಿ ಕಾಣಿಕೆ ಸಂಗ್ರಹ
ಹೀಗಿದ್ದರೂ ಆವರಣದಲ್ಲಿರುವ ಅಂಗಡಿಗಳು ತೆರೆದಿವೆ. ಕಾಯಿ, ಕರ್ಪೂರ ಖರೀದಿಗೆ ಭಕ್ತರು ಮುಗಿ ಬೀಳುತ್ತಿದ್ದಾರೆ. ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ವ್ಯಾಪಾರ, ವಹಿವಾಟು ನಡೆಸಲಾಗುತ್ತಿದೆ.