ಬೆಳಗಾವಿ: ದೀಪಾವಳಿ ಅಮಾಮಾಸ್ಯೆಯಂದೇ ಕೇತುಗ್ರಸ್ಥ ಖಂಡಗ್ರಾಸ ಸೂರ್ಯಗ್ರಹಣ ಹಿನ್ನೆಲೆ ಬೆಳಗಾವಿಯ ಕಪಿಲೇಶ್ವರ ದೇವಸ್ಥಾನದ ಶಿವಲಿಂಗವನ್ನು ಬಿಲ್ವಪತ್ರೆಗಳಿಂದ ಅರ್ಚಕರು ಮುಚ್ಚಿದ್ದಾರೆ. ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪ್ರತಿದಿನ ಸಂಜೆ 4.30ಕ್ಕೆ ನೆರವೇರುತ್ತಿದ್ದ ಇಂದಿನ ಪೂಜೆಯನ್ನು ಮುಂದೂಡಿಕೆ ಮಾಡಲಾಗಿದೆ.
ದಕ್ಷಿಣಕಾಶಿ ಎಂದೇ ಪ್ರಸಿದ್ಧವಾದ ಬೆಳಗಾವಿಯ ಕಪಿಲೇಶ್ವರ ಮಂದಿರ ಆವರಣದಲ್ಲಿರುವ ಗಣೇಶ, ಸಾಯಿಬಾಬಾ, ವಿಷ್ಣು ಮಂದಿರ ಸೇರಿ ವಿವಿಧ ದೇವಸ್ಥಾನಗಳಲ್ಲಿ ಮೂರ್ತಿಯನ್ನು ದೇವಸ್ಥಾನದ ಅರ್ಚಕರು ಬಟ್ಟೆಯಿಂದ ಸುತ್ತಿದ್ದಾರೆ. ಸಂಜೆ 4 ರಿಂದ 6.30ರವರೆಗೆ ಕಪಿಲೇಶ್ವರ ದೇವಸ್ಥಾನದಲ್ಲಿ ಮಹಾಮೃತ್ಯುಂಜಯ ಜಪ ಮಾಡಲಾಗುತ್ತದೆ.
ಸವದತ್ತಿ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಪೂಜೆ ಸಂಜೆಗೆ ಮುಂದೂಡಿಕೆ ಯಲ್ಲಮ್ಮದೇವಿ ದೇಗುಲ ಶುಚಿಗೊಳಿಸಿ ವಿಶೇಷ ಪೂಜೆ: ಸವದತ್ತಿಯ ರೇಣುಕಾ ಯಲ್ಲಮ್ಮ ದೇವಾಲಯದಲ್ಲಿ ದರ್ಶನಕ್ಕೆ ಅನುವು ನೀಡಿದರೂ ಗ್ರಹಣದ ವೇಳೆ ಆರತಿ, ಪ್ರಸಾದ ಇರಲ್ಲ. ಪ್ರತಿದಿನ ಸಂಜೆ 4.30ಕ್ಕೆ ನೆರವೇರುತ್ತಿದ್ದ ಇಂದಿನ ಪೂಜೆ ಸಂಜೆ 6:30ರ ಬಳಿಕ ಜರುಗಲಿದೆ. ಗ್ರಹಣ ಸಮಾಪ್ತಿ ಬಳಿಕ ಯಲ್ಲಮ್ಮದೇವಿ ದೇಗುಲ ಶುಚಿಗೊಳಿಸಿ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.
ಜಪದಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ:ಬೆಳಗಾವಿ ನಗರದಲ್ಲಿ ಸಂಜೆ 5 ಗಂಟೆ 11 ನಿಮಿಷಕ್ಕೆ ಗ್ರಹಣ ಆರಂಭವಾಗಲಿದ್ದು, ಗ್ರಹಣ ಮಧ್ಯಕಾಲ ಸಂಜೆ 5 ಗಂಟೆ 50 ನಿಮಿಷ ಹಾಗೂ ಗ್ರಹಣ ಮೋಕ್ಷ ಕಾಲ ಸಂಜೆ 6 ಗಂಟೆ 28 ನಿಮಿಷಕ್ಕೆ ಇದೆ. ಗ್ರಹಣ ಸಮಯದಲ್ಲಿ ದೇವಸ್ಥಾನದ ಒಳಗೆ ಮಹಾಮೃತ್ಯುಂಜಯ ಜಪದಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶವನ್ನು ನೀಡಲಾಗಿದೆ.
ಓದಿ:ಇಂದು ಸೂರ್ಯಗ್ರಹಣ: ಈ ಸಂದರ್ಭ ಏನು ಮಾಡಬೇಕು? ಏನು ಮಾಡಬಾರದು?