ಬೆಳಗಾವಿ :ರಾಜ್ಯಾದ್ಯಂತ ಜೂ. 8 ರಿಂದ ದೇಗುಲಗಳು ಪ್ರಾರಂಭಗೊಳ್ಳಲಿವೆ. ಆದರೆ, ಜಿಲ್ಲೆಯ ಸವದತ್ತಿಯ ರೇಣುಕಾ ಯಲ್ಲಮ್ಮ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನಗಳು ಜೂ. 30 ರ ರವರೆಗೆ ಬಂದ್ ಆಗಿರಲಿವೆ.
ಜಿಲ್ಲೆಯ ಈ ಎರಡೂ ದೇವಾಲಯಗಳಿಗೆ ಜೂನ್ 30 ರವರೆಗೆ ಭಕ್ತರ ಪ್ರವೇಶಕ್ಕೆ ನಿಷೇಧ ಹೇರಲಾಗಿದೆ. ಮಹಾರಾಷ್ಟ್ರ ಕೊರೊನಾ ಹಾಟ್ಸ್ಪಾಟ್ ಆಗಿರುವುದರಿಂದ, ಈ ದೇವಸ್ಥಾನಗಳಿಗೆ ಮಹಾರಾಷ್ಟ್ರದಿಂದ ಹೆಚ್ಚಿನ ಭಕ್ತರು ಪ್ರತಿವರ್ಷ ಭೇಟಿ ನೀಡುತ್ತಾರೆ. ಈ ಕಾರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಎರಡೂ ದೇಗುಲಗಳನ್ನು ತೆರೆಯದಿರಲು ಜಿಲ್ಲಾಡಳಿತ ನಿರ್ಧರಿಸಿದೆ.
ಜೂನ್ 30 ರವರೆಗೆ ಸವದತ್ತಿ ರೇಣುಕಾ, ಚಿಂಚಲಿ ಮಾಯಕ್ಕ ದೇವಸ್ಥಾನ ಬಂದ್
ಬೆಳಗಾವಿಯಲ್ಲಿ ಕೊರೊನಾ ಭಯದ ಹಿನ್ನೆಲೆಯಲ್ಲಿ ರೇಣುಕಾ ಯಲ್ಲಮ್ಮ ಹಾಗೂ ಚಿಂಚಲಿ ಮಾಯಕ್ಕ ದೇವಸ್ಥಾನಗಳು ಜೂ. 30 ರವರೆಗೆ ಬಂದ್ ಇರಲಿವೆ ಎಂದು ಜಿಲ್ಲಾಡಳಿತ ಭಕ್ತರಿಗೆ ತಿಳಿಸಿದೆ.
ಜೂನ್ 30 ರವರೆಗೆ ದೇವಸ್ಥಾನ ಬಂದ್
ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು ಜಿಲ್ಲಾ ಉಸ್ತುವಾರಿ ಸಚಿವರ ಸಭೆಯಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಚಿಂಚಲಿ ಮಾಯಕ್ಕ ದೇವಸ್ಥಾನ ಬಂದ್ ಮಾಡಲು ಮನವಿ ಮಾಡಿದ್ದರು.