ಕರ್ನಾಟಕ

karnataka

ETV Bharat / state

ಸಾತ್ನಾಳಿ-ಮಾಚಾಳಿ ಗ್ರಾಮದ ಸೇತುವೆ ಮುಳುಗಡೆ.. ಶಾಶ್ವತ ಪರಿಹಾರಕ್ಕೆ ಗ್ರಾಮಸ್ಥರ ಒತ್ತಾಯ - Satnali Machali village bridge drowning in Khanapur taluk

ಖಾನಾಪೂರಕ್ಕೆ ಸಂಪರ್ಕ ಕಲ್ಪಿಸುವ ಸಾತ್ನಾಳಿ-ಮಾಚಾಳಿ ಸೇತುವೆ ಮುಳುಗಡೆ- ಜನರಿಗೆ ಸಂಕಷ್ಟ- ಶಾಶ್ವತ ಪರಿಹಾರಕ್ಕೆ ಒತ್ತಾಯ

ಖಾನಾಪೂರ ತಾಲೂಕಿನ ಸಾತ್ನಾಳಿ-ಮಾಚಾಳಿ ಗ್ರಾಮದ ಸೇತುವೆ ಮುಳುಗಡೆ
ಖಾನಾಪೂರ ತಾಲೂಕಿನ ಸಾತ್ನಾಳಿ-ಮಾಚಾಳಿ ಗ್ರಾಮದ ಸೇತುವೆ ಮುಳುಗಡೆ

By

Published : Jul 18, 2022, 4:05 PM IST

ಬೆಳಗಾವಿ: ಕಳೆದ 20 ದಿನಗಳಿಂದ ಪಶ್ಚಿಮಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಖಾನಾಪೂರ ತಾಲೂಕಿಗೆ ಸಂಪರ್ಕ ಕಲ್ಪಿಸುವ ಸಾತ್ನಾಳಿ-ಮಾಚಾಳಿ ಗ್ರಾಮದ ಸೇತುವೆ ಮುಳುಗಡೆ ಆಗಿದೆ. ವೈದ್ಯಕೀಯ ಸೌಲಭ್ಯ ಪಡೆಯಲು ಸಮಸ್ಯೆ ಆಗ್ತಿದೆ. ಹೀಗಾಗಿ, ಶಾಶ್ವತ ಪರಿಹಾರ ಕಲ್ಪಿಸುವಂತೆ ಗ್ರಾಮಸ್ಥರು ಮೊಬೈಲ್ ವಿಡಿಯೋ ಮೂಲಕ ಮನವಿ ಮಾಡಿದ್ದಾರೆ.

ಖಾನಾಪೂರ ತಾಲೂಕಿನ ಸಾತ್ನಾಳಿ-ಮಾಚಾಳಿ ಗ್ರಾಮದ ಸೇತುವೆ ಮುಳುಗಡೆ

ಸದ್ಯ ಪಶ್ಚಿಮಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆ ಆಗುತ್ತಿರುವ ಹಿನ್ನೆಲೆ ಮೈದುಂಬಿ ಹರಿಯುತ್ತಿರುವ ಪಾಂಡ್ರಿ ನದಿಯ ನೀರಿನ ಒಳಹರಿವು ಹೆಚ್ಚಾಗಿದ್ದು, ಸೇತುವೆ ಮೇಲೆ ನಾಲ್ಕು ಅಡಿ ನೀರು ಬಂದಿದೆ. ಆದ್ರೆ, ಕೆಲವರು ಅಪಾಯವನ್ನು ಲೆಕ್ಕಿಸದೇ ಮುಳುಗಡೆಯಾದ ಸೇತುವೆ ಮೇಲೆಯೇ ಬೈಕ್ ಸವಾರಿ ಮಾಡುತ್ತಿದ್ದಾರೆ.

ಈ ಕುರಿತು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ ಗ್ರಾಮಸ್ಥರೊಬ್ಬರು ಮಾತನಾಡಿ, ಪ್ರತಿಬಾರಿ ಮಳೆಗಾಲದಲ್ಲಿ ಇದೇ ಸಮಸ್ಯೆ ಎದುರಿಸುತ್ತೇವೆ. ಎಂಎಲ್‌ಎ, ಎಂಪಿ ಸೇರಿ ಎಲ್ಲ ಜನಪ್ರತಿನಿಧಿಗಳಿಗೆ ಮನವಿ ಮಾಡಿದ್ದೇವೆ. ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರಿಗೆ ತೊಂದರೆ ಆಗ್ತಿದೆ. ಗ್ರಾಮದಲ್ಲಿ ಯಾರಿಗಾದರೂ ಅನಾರೋಗ್ಯ ಕಾಣಿಸಿಕೊಂಡರೆ ವೈದ್ಯಕೀಯ ಸೌಲಭ್ಯನೂ ಸಿಗುತ್ತಿಲ್ಲ. ಸೇತುವೆಯ ಎತ್ತರ ಮಟ್ಟವನ್ನು ಹೆಚ್ಚಿಸಿ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದ್ದಾರೆ.

ಓದಿ:ಕೇಂದ್ರ ಸರ್ಕಾರ ಬಡ, ಮಧ್ಯಮ ವರ್ಗದವರ ರಕ್ತ ಹೀರುತ್ತಿದೆ: ಸಿದ್ದರಾಮಯ್ಯ

For All Latest Updates

TAGGED:

ABOUT THE AUTHOR

...view details