ಗೋಕಾಕ್‌ನಲ್ಲಿ ಸತೀಶ್ ಜಾರಕಿಹೊಳಿ ಸಂಚಾರ; ರಸ್ತೆ ದುರವಸ್ಥೆ ಕಂಡು ಅಧಿಕಾರಿಗಳ ಮೇಲೆ ಆಕ್ರೋಶ - ಸತೀಶ್ ಜಾರಕಿಹೊಳಿ ಸಂಚಾರ
ಗೋಕಾಕ್ ನಗರದಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಮಾಜಿ ಸಚಿವ ಹಾಗೂ ಶಾಸಕ ಸತೀಶ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೋಕಾಕ್ ನಗರದ ಬೀದಿಯಲ್ಲಿ ಸತೀಶ್ ಜಾರಕಿಹೊಳಿ ಸಂಚಾರ
ಗೋಕಾಕ್:ನಗರದಲ್ಲಿ ಹದಗೆಟ್ಟ ರಸ್ತೆಗಳ ಬಗ್ಗೆ ಶಾಸಕ ಸತೀಶ ಜಾರಕಿಹೊಳಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮಂಗಳವಾರ ಸಂಜೆ ನಗರದ ವಿವಿಧ ರಸ್ತೆಗಳಲ್ಲಿ ಕಾಲ್ನಡಿಗೆಯಲ್ಲೇ ತಿರುಗಾಡಿದ ಅವರು, ಜನರು ಸಂಚರಿಸಲು ಯೋಗ್ಯವಲ್ಲದ ರಸ್ತೆಗಳ ದುಃಸ್ಥಿತಿ ಕಂಡು ನಗರಸಭೆಯ ಆಡಳಿತದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ರು.ನಗರಸಭೆ ಅಧಿಕಾರಿಗಳು ಈ ರಸ್ತೆಗಳಲ್ಲಿ ಅಡ್ಡಾಡಿರುವುದಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ ಎಂದು ಅವರು ಕಿಡಿ ಕಾರಿದ್ರು.
ಗೋಕಾಕ್ ನಗರದ ಬೀದಿಯಲ್ಲಿ ಸತೀಶ್ ಜಾರಕಿಹೊಳಿ ಸಂಚಾರ
ಶಾಸಕರು ಕಾಲ್ನಡಿಗೆಯಲ್ಲಿ ಸಂಚರಿಸುವಾಗ ಅಲ್ಲಲ್ಲಿ ನಿಂತು ಜನತೆಯ ಅಹವಾಲು ಸ್ವೀಕರಿಸಿದ್ರು.