ಚಿಕ್ಕೋಡಿ: ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ ದೇಶದಲ್ಲಿ ಆಹಾರ ಅಭದ್ರತೆ ಉಂಟಾಗಿತ್ತು ಎಂದು ನಾವು ಕೇಳಿದ್ದೆವು. ಆದರೆ ಈಗ ನೋಡುತ್ತಿದ್ದೇವೆ ಎಂದು ಶಾಸಕ ಸತೀಶ್ ಜಾರಕಿಹೋಳಿ ಬಿಜೆಪಿ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಆಹಾರ ಅಭದ್ರತೆ ಬಗ್ಗೆ ಅಂದು ಕೇಳಿದ್ದೆವು, ಈಗ ನೋಡುತ್ತಿದ್ದೇವೆ: ಸತೀಶ್ ಜಾರಕಿಹೋಳಿ
ಲಾಕ್ಡೌನ್ ಜಾರಿ ಆಗಿದ್ದರಿಂದ ವಲಸೆ ಕಾರ್ಮಿಕರ ಹಸಿವಿನ ನರಳಾಟ ನೋಡುವ ದೌರ್ಭಾಗ್ಯ ನಮ್ಮದಾಗಿದೆ ಎಂದು ಟ್ವೀಟ್ ಮಾಡುವ ಮುಖಾಂತರ ಪ್ರಧಾನಿ ಮೋದಿ ವಿರುದ್ಧ ಶಾಸಕ ಸತೀಶ್ ಜಾರಕಿಹೋಳಿ ವಾಗ್ದಾಳಿ ನಡೆಸಿದ್ದಾರೆ.
ಕೇಂದ್ರ ಸರ್ಕಾರ ಪೂರ್ವ ತಯಾರಿ ಇಲ್ಲದೆ ಲಾಕ್ಡೌನ್ ಜಾರಿ ಮಾಡಿದ್ದರಿಂದ ವಲಸೆ ಕಾರ್ಮಿಕರ ಹಸಿವಿನ ನರಳಾಟ ನೋಡುವ ದೌರ್ಭಾಗ್ಯ ನಮ್ಮದಾಗಿದೆ ಎಂದು ಟ್ವೀಟ್ ಮಾಡುವ ಮುಖಾಂತರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸಂಕಷ್ಟಕ್ಕೆ ಸಿಲುಕಿರುವ ವಲಸೆ ಕಾರ್ಮಿಕರ ಬಗ್ಗೆ ಬರೆದುಕೊಂಡಿರುವ ಅವರು, ದೇಶದ ಮೂಲೆ ಮೂಲೆಯಲ್ಲಿ ನೆಲೆಸಿರುವ ಕರ್ನಾಟಕ ಕೂಲಿ ಕಾರ್ಮಿಕರು ನಮ್ಮ ರಾಜ್ಯಕ್ಕೆ ಮರಳುತ್ತಿದ್ದಾರೆ. ಆದರೆ ನಮ್ಮ ರಾಜ್ಯದಲ್ಲಿ ನೆಲೆಸಿರುವ ಹೊರ ರಾಜ್ಯದ ವಲಸೆ ಕೂಲಿ ಕಾರ್ಮಿಕರ ಗೋಳು ಕೇಳುವವರಿಲ್ಲದಾಗಿದೆ. ಇವರ ಕಡೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಗಮನ ನೀಡುತ್ತಿಲ್ಲ ಎಂದು ಅಸಮಾಧಾನ ಹೊರ ಹಾಕಿದ್ದಾರೆ.