ಬೆಳಗಾವಿ: ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್‌ಗೆ ಭಾರತೀಯ ಇತಿಹಾಸ ಗೊತ್ತಿಲ್ಲ. ಕರ್ನಾಟಕಕ್ಕೆ ಕಾಲಿಡುವ ಮುನ್ನ ಅವರು ಮೊದಲು ಬಸವಣ್ಣನವರ ಬಗ್ಗೆ ತಿಳಿದುಕೊಳ್ಳಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಸಲಹೆ ನೀಡಿದರು.
ಅರುಣ್ ಸಿಂಗ್ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ಸತೀಶ್ ಜಾರಕಿಹೊಳಿ ಭಾರತೀಯ ಸಂಸ್ಕೃತಿ ವಿರೋಧಿ ಎಂಬ ಅರುಣ್ ಸಿಂಗ್ ಹೇಳಿಕೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮೌಢ್ಯದ ವಿರುದ್ಧ ಹೋರಾಟ ಆರಂಭವಾಗಿದ್ದು, ಜನ ಹಾಳಾಗಬಾರದೆಂದು ಇಂತಹ ಕಾರ್ಯಕ್ರಮಗಳನ್ನು ನಾವು ಮುಂದುವರಿಸಿಕೊಂಡು ಬಂದಿದ್ದೇವೆ. ಇದು ಯಾವುದೇ ಧರ್ಮ, ಜಾತಿ ವಿರುದ್ಧದ ಕಾರ್ಯಕ್ರಮ ಅಲ್ಲ. 12ನೇ ಶತಮಾನದಲ್ಲಿ ಬಸವಾದಿ ಶರಣರು ಮೌಢ್ಯತೆಯ ವಿರುದ್ಧ ಧ್ವನಿ ಎತ್ತಿದ್ದರು. ಹಾಗಾಗಿ ಕರ್ನಾಟಕಕ್ಕೆ ಕಾಲಿಡುವ ಮುನ್ನ ಬಸವಣ್ಣನವರ ಬಗ್ಗೆ ಅರುಣ್ ಸಿಂಗ್ ತಿಳಿದುಕೊಳ್ಳಬೇಕು. ಸುಮ್ಮನೇ ಬಂದು ಏನೋ ಹೇಳಿ ಹೋಗುವುದಲ್ಲ ಎಂದು ಟಾಂಗ್ ಕೊಟ್ಟರು.
ಓದಿ: ಕಾಂಗ್ರೆಸ್ ಒಡೆದ ಮನೆಯಾಗಿದೆ: ಅರುಣ್‌ಸಿಂಗ್ ವ್ಯಂಗ್ಯ!
ಸತೀಶ್ ಜಾರಕಿಹೊಳಿ ಗೆದ್ರೆ ಬೆಳಗಾವಿಯಲ್ಲಿ ಭಯೋತ್ಪಾದನೆ ಶುರುವಾಗುತ್ತೆ, ಕೋಮುಗಲಭೆಗಳು ಉಂಟಾಗುತ್ತವೆ ಎಂಬ ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಸತೀಶ್, ಕೋಮುಗಲಭೆ ಮಾಡೋರು ಬಿಜೆಪಿಯವರು. ಜನರು ಯಾರಿಗೆ ಮತ ಹಾಕಬೇಕು ಅನ್ನೋದ ಬಗ್ಗೆ ಮೊದಲೇ ಯೋಚನೆ ಮಾಡಿದ್ದಾರೆ. ಯಾರೇ ಬಂದು ಹೇಳಿಕೆ ಕೊಟ್ಟರೂ ಫಲಿತಾಂಶ ಬದಲಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಓದಿ: ಸತೀಶ್ ಜಾರಕಿಹೊಳಿ ಗೆದ್ದು ಬಂದ್ರೆ ಬೆಳಗಾವಿಯಲ್ಲಿ ಭಯೋತ್ಪಾದನೆ ಶುರುವಾಗುತ್ತೆ: ಯತ್ನಾಳ್
ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಅತೀ ಹೆಚ್ಚು ಉಗ್ರರ ದಾಳಿಯಾಗಿದೆ ಎಂಬ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರವಾಗಿ ಮಾತನಾಡಿ, ಈ ಏಳು ವರ್ಷದಲ್ಲಿ ನಮ್ಮ ಸೈನಿಕರು ಹೆಚ್ಚು ಹುತಾತ್ಮರಾಗಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಜಾರಕಿಹೊಳಿ ತಿರುಗೇಟು ನೀಡಿದರು.