ಚಿಕ್ಕೋಡಿ(ಬೆಳಗಾವಿ): ರಮೇಶ್ ಜಾರಕಿಹೊಳಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮೇಲೆ ಮಾಡಿರುವ ಆರೋಪಗಳು ಹಾಗೂ ಅವರ ನಡುವಣ ವಿಚಾರಗಳಾಗಿವೆ. ಇದರ ಬಗ್ಗೆ ನಾನು ಏನೂ ಮಾತನಾಡುವುದಿಲ್ಲ. ಇದು ರಮೇಶ್ ಮತ್ತು ಡಿಕೆಶಿ ಇಬ್ಬರ ನಡುವಣ ವಿಚಾರಕ್ಕೆ ನಾನು ಉತ್ತರ ನೀಡುವುದು ಸರಿಯಾಗುವುದಿಲ್ಲ. ನಮ್ಮ ಅಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು ಏನು ಪ್ರತಿಕ್ರಿಯೆ ನೀಡುತ್ತಾರೆ ನೋಡೋಣ. ಸದ್ಯ ರಮೇಶ್ ಜಾರಕಿಹೊಳಿ ಅವರದ್ದೇ ಸರ್ಕಾರ ಇರುವುದರಿಂದ ಇದನ್ನು ಅವರ ಪಕ್ಷ ಯಾವ ರೀತಿ ತೆಗೆದುಕೊಳ್ಳುತ್ತೆ ಎಂಬುದು ಅವರಿಗೆ ಬಿಟ್ಟ ವಿಚಾರ ಎಂದು ಕೆಪಿಸಿಸಿ ಕಾರ್ಯಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದಲ್ಲಿ ಡಿಕೆಶಿ ಶಾಮೀಲಾಗಿದ್ದಾರೆ ಎಂದು ಆರೋಪ ವಿಚಾರವಾಗಿ ಯಮಕನಮರಡಿ ತಾಲೂಕಿನ ಮನಗುತ್ತಿ ಗ್ರಾಮದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ ನೀಡಿದರು. ಒಂದು ಕಡೆ ಕಾಂಗ್ರೇಸ್ ಪಕ್ಷ ಮತ್ತೊಂದು ಕಡೆ ಬಿಜೆಪಿಯಲ್ಲಿ ನಿಮ್ಮ ಸಹೋದರ, ಇದು ನಿಮಗೆ ಸಂದಿಗ್ಧ ಪರಿಸ್ಥಿತಿ ಅಲ್ವಾ ಎಂಬ ಮಾಧ್ಯಮದವರ ಪ್ರಶ್ನೆಗೆ ರಮೇಶ್ ಸಿಡಿ ವಿಷಯ ಹಾಗೂ ಸಿಬಿಐ ವಿಷಯ ಇರಬಹುದು. ರಮೇಶ್ ಜಾರಕಿಹೊಳಿ ಅವರು ಪಕ್ಷದ ಒಂದು ಪಾರ್ಟ್, ನಿರ್ಣಯ ಮಾಡೋದು ಅವರ ಪಕ್ಷಕ್ಕೆ ಬಿಟ್ಟಿದ್ದು ಎಂದು ಹೇಳಿದರು.
ಡಿಕೆ ಶಿವಕುಮಾರ್ ಅವರು ಬಹಳಷ್ಟು ಜನರ ಸಿಡಿ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡುತ್ತಾರೆ ಎಂಬ ರಮೇಶ್ ಆರೋಪದ ವಿಚಾರಕ್ಕೆ ಉತ್ತರಿಸಿ, ಆ ಆರೋಪವೂ ಸಹ ಅವರಿಬ್ಬರಿಗೆ ಬಿಟ್ಟಿದ್ದು ನಾವು ಹೊರಗಿನವರು ಏನು ಹೇಳಲು ಆಗೊಲ್ಲ ಎಂದು ಹೇಳುವ ಮೂಲಕ ಸಿಡಿ ವಿಚಾರದಲ್ಲಿ ನಾಜೂಕಿನ ಉತ್ತರ ಕೊಟ್ಟರು.