ಕರ್ನಾಟಕ

karnataka

ETV Bharat / state

ರಮೇಶ್​ ಜಾರಕಿಹೊಳಿ ಅಳಿಯನ ಕೈಗೊಂಬೆ: ಸತೀಶ್​ ‌ಜಾರಕಿಹೊಳಿ‌ ವಾಗ್ದಾಳಿ

ರಮೇಶ್ ಜಾರಕಿಹೊಳಿ​ ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ‌ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ‌ಮನೆತನದ ಗೌರವದ ಪ್ರಶ್ನೆ ಬರಲ್ಲ, ನನ್ನ ವಿರುದ್ಧ ಹಗರಣಗಳಿದ್ದರೆ ರಮೇಶ ಬಹಿರಂಗ ‌ಪಡಿಸಲಿ ಎಂದು ಸಹೋದರನಿಗೆ ಮಾಜಿ ಸಚಿವ ಸತೀಶ್​ ಜಾರಕಿಹೊಳಿ ಸವಾಲು ಹಾಕಿದ್ದಾರೆ. ಅಳಿಯ- ಮಾವ ಕೂಡಿಯೇ ಗೋಕಾಕ್​ ಲೂಟಿ ಹೊಡೆದಿದ್ದಾರೆ, ಇದಕ್ಕಿಂತ ದೊಡ್ಡ ಹಗರಣ ಬೇಕಾ ಎಂದು ಸತೀಶ್​ ‌ಆರೋಪಿಸಿದ್ದಾರೆ.

ಶಾಸಕ ಸತೀಶ ‌ಜಾರಕಿಹೊಳಿ‌

By

Published : Sep 23, 2019, 3:05 PM IST

ಬೆಳಗಾವಿ: ಅಳಿಯ ಅಂಬಿರಾವ್ ಪಾಟೀಲ್​ ಜತೆ ಸೇರಿ ಅನರ್ಹ ಶಾಸಕ ರಮೇಶ್​ ‌ಜಾರಕಿಹೊಳಿ ಗೋಕಾಕ್​ ಲೂಟಿ ಹೊಡೆದಿದ್ದಾರೆ ಎಂದು ಶಾಸಕ ಸತೀಶ್​ ‌ಜಾರಕಿಹೊಳಿ‌ ಗಂಭೀರ ಆರೋಪ‌ ಮಾಡಿದ್ದಾರೆ.

ಗೃಹಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಬದ್ಧತೆ ಇಲ್ಲದ ರಾಜಕಾರಣಿ.‌ ನನ್ನ ವಿರುದ್ಧ ಸುಖಾಸುಮ್ಮನೆ ಆರೋಪ‌ ಮಾಡುತ್ತಿದ್ದಾರೆ. ರಾಜಕಾರಣದಲ್ಲಿ ‌ಮನೆತನದ ಗೌರವ ಪ್ರಶ್ನೆ ಬರಲ್ಲ, ನನ್ನ ವಿರುದ್ಧ ಹಗರಣಗಳಿದ್ದರೆ ರಮೇಶ ಬಹಿರಂಗ ‌ಪಡಿಸಲಿ ಎಂದು ಸವಾಲು ಹಾಕಿದ‌ರು.

ಜಾರಕಿಹೊಳಿ ಸಾಮ್ರಾಜ್ಯ ಕಟ್ಟಿದ್ಯಾರು ಎಂಬುದನ್ನು ಗೋಕಾಕ್​ ಕ್ಷೇತ್ರದ ‌ಜನರನ್ನೇ ಕೇಳಿದರೆ ಗೊತ್ತಾಗುತ್ತದೆ. ರಮೇಶ್​ ಜಾರಕಿಹೊಳಿ ಶಾಸಕನಾದರೂ ಅಳಿಯ ಅಂಬಿರಾವ್ ಪಾಟೀಲ್​ ಹಿಡಿತದಲ್ಲಿದ್ದಾರೆ. ಅಂಬಿರಾವ್ ಹೇಳಿದಂತೆ ಕೇಳಬೇಕಾದ ಸ್ಥಿತಿ ರಮೇಶಗೆ ನಿರ್ಮಾಣವಾಗಿದೆ ಎಂದು ಸತೀಶ್​ ವ್ಯಂಗ್ಯವಾಡಿದ್ರು.

ತಾಲೂಕಿನ ಸ್ಥಳೀಯ ಸಂಸ್ಥೆಗಳು, ತಾ.ಪಂ, ಜಿ.ಪಂ. ಸದಸ್ಯರು, ಅಧಿಕಾರಿಗಳನ್ನು ಅಂಬಿರಾವ್ ಪಾಟೀಲ್ ಹಿಡಿತದಲ್ಲಿಟ್ಟುಕೊಂಡಿದ್ದಾರೆ. ಸ್ಥಳೀಯರು ತಮ್ಮ ಕೆಲಸ ಮಾಡಿಸಿಕೊಳ್ಳಲು ಶಾಸಕರ ಬದಲು ಅಂಬಿರಾವ್ ಪಾಟೀಲ್ ಮೊರೆ ಹೋಗಬೇಕು. ಅಂದಾಗ ಮಾತ್ರ ಸ್ಥಳೀಯರ‌ ಕೆಲಸಗಳು ಸುಗಮವಾಗಿ ‌ಆಗುತ್ತವೆ ಎಂದು‌ ಸತೀಶ್​ ಜಾರಕಿಹೊಳಿ ಕುಟುಕಿದರು.

ಶಾಸಕ ಸತೀಶ ‌ಜಾರಕಿಹೊಳಿ‌

ಕಳೆದ ಮೂರು ಚುನಾವಣೆಗಳಿಂದ ಸ್ಪರ್ಧಿಸುವಂತೆ ಲಖನ್ ಗೆ ರಮೇಶ ಆಸೆ ತೋರಿಸುತ್ತಿದ್ದಾನೆ. ಕೊನೆ‌ ಕ್ಷಣದಲ್ಲಿ ಲಖನ್‌ ಲಾಭ ಪಡೆದು ರಮೇಶ್​ ‌ಸ್ಪರ್ಧಿಸಿ ಗೆಲುವು ಸಾಧಿಸುತ್ತಿದ್ದಾರೆ. ಲಖನ್- ತಾನು ಒಂದೇ ಎಂದು ರಮೇಶ್​ ಕ್ಷೇತ್ರದ ಜನರ‌ ದಿಕ್ಕು ತಪ್ಪಿಸುವ ಕೆಲಸವನ್ನು ರಮೇಶ ಮಾಡುತ್ತಿದ್ದಾರೆ. ಮೊದಲಿನಿಂದ ಲಖನ್ ರಮೇಶ್​ ಜತೆಗೆ ಇದ್ದರು. ರಮೇಶ ವರ್ತನೆಗೆ ಬೇಸತ್ತು‌ ಈಗ ಸಹೋದರ ಲಖನ್ ನನ್ನ ಬಳಿ ಬಂದಿದ್ದಾರೆ. ಉಪಚುನಾವಣೆಯಲ್ಲಿ ಲಖನ್‌ ಕಾಂಗ್ರೆಸ್ ‌ಅಭ್ಯರ್ಥಿ ಆಗಲಿದ್ದಾರೆ. ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಈ ಬಾರಿ ನಾವು ಕೂಡ ಉಪಚುನಾವಣೆಯನ್ನು ಗಂಭೀರವಾಗಿ ಆಗಿ ತೆಗೆದುಕೊಂಡಿದ್ದೇವೆ ಎಂದರು.

ತಾನು ಕಳೆದುಕೊಂಡ ವಸ್ತುವನ್ನು ರಮೇಶನೇ ಬಹಿರಂಗ ‌ಪಡಿಸಿದರೆ ಇನ್ನೂ ಖುಷಿ. ಆ ವಸ್ತು ಯಾವುದೆಂಬುವುದು ರಮೇಶಗೆ ಗೊತ್ತಿದ್ದರೂ ನಾಟಕ ಮಾಡುತ್ತಿದ್ದಾನೆ. ಗೋಕಾಕ್​ ಕಾಂಗ್ರೆಸ್ ಸಮಾವೇಶದ ವೇದಿಕೆ ಮೇಲೆ ರಮೇಶ್​ ಬಂದರೆ ಕ್ಷೇತ್ರದ ‌ಅಭಿವೃದ್ಧಿ ಬಗ್ಗೆಯೂ ಬಹಿರಂಗ ಚರ್ಚೆ ನಡೆಸಬಹುದು. ಗೋಕಾಕ್​ ಅಭಿವೃದ್ಧಿಗೆ ರಮೇಶನ ಕೊಡುಗೆ, ಪ್ರವಾಹದಲ್ಲಿ ಎಷ್ಟು ಜನರ ಬಳಿ ಹೋಗಿದ್ದಾರೆ ಎಂದು‌ ಕೇಳಲು ಅನುಕೂಲ ಆಗುತ್ತದೆ ಎಂದು ಅಣ್ಣನಿಗೆ ಸತೀಶ್​ ಜಾರಕಿಹೊಳಿ ಸವಾಲು ಹಾಕಿದರು.

ABOUT THE AUTHOR

...view details