ಗೋಕಾಕ್:ಉಪಚುನಾವಣೆ ಹಿನ್ನಲೆಯಲ್ಲಿ ಮತಯಾಚನೆ ವೇಳೆ ಮಾಜಿ ಸಚಿವ ಸತೀಶ್ ಜಾರಕಿಹೊಳಿ ಬಳಿ ಮಹಿಳೆಯರು ತಮ್ಮ ಸಮಸ್ಯೆ ಪರಿಹಾರಕ್ಕಾಗಿ ಮನವಿ ಮಾಡಿದ್ರು. ಸಮಸ್ಯೆ ಪರಿಹರಿಸಿದ್ರೆ ಮಾತ್ರ ಮತ ಹಾಕುವುದಾಗಿ ಎಚ್ಚರಿಕೆಯನ್ನೂ ನೀಡಿದ್ರು.
ಸಮಸ್ಯೆ ಬಗೆಹರಿಸಿದ್ರೆ ಅಷ್ಟೇ ವೋಟು ಹಾಕ್ತೇವಿ... ಸತೀಶ್ಗೆ ಮಹಿಳೆಯರ ಎಚ್ಚರಿಕೆ - ಲಖನ್ ಪರ ಮತ ಯಾಚಿಸಿದ ಸತೀಶ್ ಲೆಟೆಸ್ಟ್ ನ್ಯೂಸ್
ಇಂದು ಶಾಸಕ ಸತೀಶ್ ಜಾರಕಿ ಹೊಳಿಯವರು ತಮ್ಮ ನಗರದ ಹೊಸಪೇಠ ಗಲ್ಲಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಯಾಚಿಸಿದರು. ಈ ವೇಳೆ ಅಲ್ಲಿನ ಮಹಿಳೆಯರು ಸಮಸ್ಯೆಗಳ ಸುರಿಮಳೆಯನ್ನೇ ಹರಿಸಿದ್ರು. ವೋಟ್ ಹಾಕಬೇಕು ಅಂದ್ರೆ ಮೊದಲು ನಮ್ಮ ಸಮಸ್ಯೆ ಬಗೆಹರಿಸ್ರಿ ಅಂತಾ ಮಹಿಳಾ ಮತದಾರರು ಹೇಳಿದ್ರು.
Satish Jarkiholi, ಸತೀಶ್ ಜಾರಕಿಹೊಳಿ
ಇಂದು ನಗರದ ಹೊಸಪೇಠಗಲ್ಲಿಯಲ್ಲಿ ಜನರ ಬಳಿ ತೆರಳಿ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಪರ ಮತಯಾಚಿಸಿದರು. ಈ ವೇಳೆ ಇಲ್ಲಿನ ಮಹಿಳೆಯರು ಸಚಿವರ ಬಳಿ ತಮ್ಮ ಸಮಸ್ಯೆಗಳನ್ನು ಬಿಚ್ಚಿಟ್ಟರು. ಕರೆಂಟ್ ಇಲ್ಲ, ರಸ್ತೆ ಸುಧಾರಣೆ ಇಲ್ಲದೆ ಸಂಕಷ್ಟ ಎದುರಿಸುತ್ತಿದ್ದೇವೆ. ಈ ಕುರಿತು ಕಳೆದ 5 ವಷ೯ಗಳಿಂದ ಕೇಳಿಕೊಳ್ಳುತ್ತಿದ್ದೇವೆ, ನಮ್ಮ ಸಮಸ್ಯೆ ಆಲಿಸೋರು ಯಾರು ಇಲ್ಲ ಎಂದು ಗೋಗರೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ, ಈ ಉದ್ದೇಶಕ್ಕಾಗಿಯೇ ಈ ಬಾರಿ ಕಾಂಗ್ರೆಸ್ನಿಂದ ಬೇರೆ ಅಭ್ಯರ್ಥಿ ಕಣಕ್ಕಿಳಿದಿರೋದು ಎಂದರು. ಇದಕ್ಕೆ ಮಹಿಳೆಯರು ಸಮಸ್ಯೆ ಬಗೆಹರಿಸಿದರೆ ಅಷ್ಟೇ ವೋಟು ಹಾಕುತ್ತೇವೆ ಎಂದರು.