ಕರ್ನಾಟಕ

karnataka

ETV Bharat / state

ಸಿದ್ದರಾಮಯ್ಯ-ಕುಮಾರಸ್ವಾಮಿ ಇಬ್ರನ್ನೂ ಹುಚ್ಚರನ್ನಾಗಿ ಮಾಡಿದ್ರು: ಸಹೋದರನ ವಿರುದ್ಧ ಸತೀಶ್​​​ ವಾಗ್ದಾಳಿ - ಕಾಂಗ್ರೆಸ್​ ಅಭ್ಯರ್ಥಿ ಲಖನ್ ಜಾರಕಿಹೊಳಿ ಹೇಳಿಕೆ

ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರನ್ನು ರಮೇಶ್ ಜಾರಕಿಹೊಳಿ ಹುಚ್ಚರನ್ನಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು. ಗೋಕಾಕ್​ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಗೋಕಾಕ್​​ ಕ್ಷೇತ್ರದಲ್ಲಿ ಉಪ ಚುನಾವಣೆಯ ಅವಶ್ಯಕತೆ ಇರಲಿಲ್ಲ ಎಂದರು.

ಸಹೋದರರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ
ಸಹೋದರರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

By

Published : Nov 27, 2019, 7:08 PM IST

ಬೆಳಗಾವಿ: ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಇಬ್ಬರನ್ನು ರಮೇಶ್ ಜಾರಕಿಹೊಳಿ ಹುಚ್ಚರನ್ನಾಗಿ ಮಾಡಿದ್ದಾರೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ರು. ಗೋಕಾಕ್​​​ನಲ್ಲಿ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಗೋಕಾಕ್​ ಕ್ಷೇತ್ರದಲ್ಲಿ ಉಪ ಚುನಾವಣೆಯ ಅವಶ್ಯಕತೆ ಇರಲಿಲ್ಲ ಎಂದರು.

ಮೈತ್ರಿ ಸರ್ಕಾರ ಹಾಗೂ ಕಾಂಗ್ರೆಸ್​​ ಸರ್ಕಾರ ರಮೇಶ್ ಹಾಗೂ ಬಾಲಚಂದ್ರ ಜಾರಕಿಹೊಳಿ‌ಗೆ ಸಾಕಷ್ಟು ಅನುದಾನ ನೀಡಿವೆ. ಆದ್ರೆ ಅವರು ಅಭಿವೃದ್ಧಿಗೆ ಸಹಕರಿಸುತ್ತಿಲ್ಲ ಎಂದು ಹೇಳಿ ಪಕ್ಷ ಬಿಟ್ಟು ಬಂದಿದ್ದಾರೆ ಎಂದರು. ಈ ಮೂಲಕ ಅವರು ಮಾಜಿ ಸಿಎಂಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರನ್ನು ಹುಚ್ಚರನ್ನಾಗಿ ಮಾಡಿದ್ದಾರೆ ಎಂದರು.

ರಮೇಶ್ ಜಾರಕಿಹೊಳಿ ಮುಖವನ್ನು ನೋಡಿ ಯಾರೂ ಮತ ಹಾಕಲ್ಲ. ಹೀಗಾಗಿ ರಮೇಶ್ ‌ಕಚೇರಿ ಇದೀಗ ಬಾಲಚಂದ್ರ ಕಚೇರಿಗೆ ಶಿಫ್ಟ್ ಆಗಿದೆ. ಬೇರೆ ಕ್ಷೇತ್ರದವರಿಗೂ ಇವರು 5ರಿಂದ 10 ಸಾವಿರ ಕೊಡುತ್ತಿದ್ದಾರೆ. ಮುಂಬೈನಲ್ಲಿ 25 ಕೋಟಿ ಹಾಗೂ ಪಕ್ಷದಿಂದ 15 ಕೋಟಿ ರಮೇಶ್ ಜಾರಕಿಹೊಳಿ ಜೇಬು ಸೇರಿದೆ ಎಂದು ಗಂಭೀರ ಆರೋಪ ಮಾಡಿದರು.

ಸಹೋದರರ ವಿರುದ್ಧ ಸತೀಶ್ ಜಾರಕಿಹೊಳಿ ವಾಗ್ದಾಳಿ

ಲಖನ್ ಜಾರಕಿಹೊಳಿ ಕೂಡ‌ ರಮೇಶ್ ಹಾಗೂ ‌ಬಾಲಚಂದ್ರರ ಗರಡಿಯಲ್ಲಿ ಕುಸ್ತಿ‌ ಕಲಿತಿದ್ದಾನೆ. ರಮೇಶ್ ತಂತ್ರಗಾರಿಕೆಯೆಲ್ಲವೂ ಲಖನ್​ಗೆ ಗೊತ್ತಿದೆ. ಈ‌ ಕಾರಣಕ್ಕೆ ಲಖನ್​ನನ್ನು ಅಭ್ಯರ್ಥಿ ಮಾಡಿದ್ದೇವೆ ಎಂದರು. ಕ್ಷೇತ್ರದ ಜನರು ಈಗಾಗಲೇ ನಿರ್ಧಾರ ಮಾಡಿದ್ದಾರೆ. ರಮೇಶ್​​ ಜಾರಕಿಹೊಳಿ‌ಯನ್ನು ಗೋಕಾಕ್​ ಕ್ಷೇತ್ರದಿಂದ ಬದಲಾಯಿಸಬೇಕಿದೆ ಎಂದರು.

ABOUT THE AUTHOR

...view details