ಕರ್ನಾಟಕ

karnataka

ETV Bharat / state

ಗೌಂಡವಾಡದಲ್ಲಿ ಎರಡು ಗುಂಪುಗಳ ನಡುವೆ ಗಲಾಟೆ.. ಸ್ಥಳಕ್ಕೆ ಸತೀಶ್​ ಜಾರಕಿಹೊಳಿ ಭೇಟಿ, ಪರಿಶೀಲನೆ - calash between two teams in Goundawada village

ಗ್ರಾಮದ ಮುಖಂಡರೊಂದಿಗೆ ಶಾಸಕ ಸತೀಶ್​ ಜಾರಕಿಹೊಳಿ ಚರ್ಚೆ ನಡೆಸಿದ್ದು, ಗಲಾಟೆ ನಡೆಸದಂತೆ ಎರಡು ಕುಟುಂಬಗಳಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಶೀಘ್ರದಲ್ಲಿ ವಿವಾದ ಅಂತ್ಯಗೊಳಿಸಲಾಗುವುದು ಎಂದು ಭರವಸೆ ನೀಡಿದರು..

Satish Jarakiholi visits Goundawada village
ಗೌಂಡವಾಡ ಗ್ರಾಮದಲ್ಲಿ ಸಭೆ ನಡೆಸಿದ ಸತೀಶ್​ ಜಾರಕಿಹೊಳಿ

By

Published : Dec 4, 2020, 6:23 PM IST

ಬೆಳಗಾವಿ :ಕಾಳ ಭೈರವನಾಥ್ ದೇವಸ್ಥಾನದ ಜಮೀನು ವಿಚಾರದಲ್ಲಿ ಯಮಕನಮರಡಿ ಕ್ಷೇತ್ರ ವ್ಯಾಪ್ತಿಯ ಗೌಂಡವಾಡ ಗ್ರಾಮದಲ್ಲಿ ಎರಡು ದಿನಗಳ ಹಿಂದೆ ಗಲಾಟೆ ನಡೆದಿದೆ. ಇಂದು ಸ್ಥಳಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಮತ್ತು ಶಾಸಕ ಸತೀಶ್​ ಜಾರಕಿಹೊಳಿ ಭೇಟಿ ನೀಡಿ ಘಟನೆ ಬಗ್ಗೆ ಮಾಹಿತಿ ಪಡೆದರು.

ದೇವಸ್ಥಾನ ಜಮೀನು ವಿಚಾರವಾಗಿ ವ್ಯಕ್ತಿಯೊಬ್ಬನ ಮೇಲೆ ಐವರ ಗುಂಪು ಮಾರಣಾಂತಿಕ ಹಲ್ಲೆ ನಡೆಸಿತ್ತು. ಇದರಿಂದಾಗಿ ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಗ್ರಾಮದ ಮುಖಂಡರೊಂದಿಗೆ ಶಾಸಕ ಸತೀಶ್​ ಜಾರಕಿಹೊಳಿ ಚರ್ಚೆ ನಡೆಸಿದ್ದು, ಗಲಾಟೆ ನಡೆಸದಂತೆ ಎರಡು ಕುಟುಂಬಗಳಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ ಶೀಘ್ರದಲ್ಲಿ ವಿವಾದವನ್ನು ಅಂತ್ಯಗೊಳಿಸಲಾಗುವುದು ಎಂದು ಭರವಸೆ ನೀಡಿದರು.

ಗೌಂಡವಾಡ ಗ್ರಾಮದಲ್ಲಿ ಸಭೆ ನಡೆಸಿದ ಸತೀಶ್​ ಜಾರಕಿಹೊಳಿ

ಇದನ್ನೂ ಓದಿ : ದೇವಸ್ಥಾನ ನಿರ್ಮಾಣಕ್ಕೆ ಮೀಸಲಿಟ್ಟ ಜಾಗ ಮಾರಲು ಹುನ್ನಾರ: ಗೌಂಡವಾಡ ಗ್ರಾಮಸ್ಥರಿಂದ ಆರೋಪ

ಈ ಸಂದರ್ಭದಲ್ಲಿ ಜಿಪಂ ಉಪಾಧ್ಯಕ್ಷ ಅರುಣ ಕಟಾಂಬಳೆ, ಜಿಪಂ ಸದಸ್ಯ ಸಿದ್ದು ಸುಣಗಾರ, ಕೆಪಿಸಿಸಿ ಸದಸ್ಯ ಮಲಗೌಡ ಪಾಟೀಲ್​, ಚೇತನ ಕಾಂಬಳೆ ಇದ್ದರು.

ABOUT THE AUTHOR

...view details