ಬೆಳಗಾವಿ: ಸಿಎಂ ಹುದ್ದೆಯ ಬಗ್ಗೆ ಈಗ ಮಾತನಾಡುವುದಿಲ್ಲ. ಮೊದಲು 113 ಜನ ಶಾಸಕರ ಆಯ್ಕೆ ಆಗಬೇಕು. ಭಿನ್ನಾಭಿಪ್ರಾಯದ ಬಗ್ಗೆ ವರಿಷ್ಠರು ಗಮನ ಹರಿಸುತ್ತಾರೆ. ಈ ಹಂತದಲ್ಲಿ ಚರ್ಚೆ ಮಾಡೊದು ಅನಾವಶ್ಯಕ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಶಾಸಕರ ಆಯ್ಕೆ ಬಳಿಕ ಸಿಎಂ ಆಯ್ಕೆ ವಿಚಾರ ಮಾತನಾಡುವೆ: ಸತೀಶ್ ಜಾರಕಿಹೊಳಿ - Satish Jarakiholi Visits Belgavi
ಕಾಂಗ್ರೆಸ್ನಲ್ಲಿ ಸಿಎಂ ಆಯ್ಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಮೊದಲು 113 ಜನ ಶಾಸಕರ ಆಯ್ಕೆ ಆಗಬೇಕು. ಆ ಬಳಿಕ ಸಿಎಂ ಆಯ್ಕೆ ಬಗ್ಗೆ ಮಾತನಾಡುತ್ತೇನೆ ಎಂದರು.
![ಶಾಸಕರ ಆಯ್ಕೆ ಬಳಿಕ ಸಿಎಂ ಆಯ್ಕೆ ವಿಚಾರ ಮಾತನಾಡುವೆ: ಸತೀಶ್ ಜಾರಕಿಹೊಳಿ Satish Jarakiholi](https://etvbharatimages.akamaized.net/etvbharat/prod-images/768-512-12314115-369-12314115-1625059917830.jpg)
ನಗರದ ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು ಚುನಾವಣೆ ಮುಗಿದ ಮೇಲೆ ಎಲ್ಲದಕ್ಕೂ ಪರಿಹಾರವಿದೆ. 2023ರ ಮೇ ಕೊನೆಯ ವಾರದಲ್ಲಿ ಈ ಬಗ್ಗೆ ಹೇಳಬಲ್ಲೆ ಎಂದರು.
ಇನ್ನು ನರೇಗಾ ಯೋಜನೆಯಲ್ಲಿ ಸಾಕಷ್ಟು ಸಮಸ್ಯೆಗಳನ್ನು ಇದ್ದವು. ಹೀಗಾಗಿ ತಾಲೂಕು ಪಂಚಾಯತ್ ಅಧ್ಯಕ್ಷರು, ಸದಸ್ಯರಿಗೆ ಹೊಂದಾಣಿಕೆ ಆಗುತ್ತಿರಲಿಲ್ಲ. ಎಲ್ಲರೂ ಹೊಂದಾಣಿಕೆ ಇಟ್ಟುಕೊಂಡು ಕೆಲಸ ಮಾಡಬೇಕು. ಇದಲ್ಲದೇ ಕ್ರಿಯಾ ಯೋಜನೆಯಲ್ಲಿ ಸಿದ್ಧಪಡಿಸಲಾಗುವ ಕೆಲಸಗಳು ಜನರಿಗೆ ಸದುಪಯೋಗ ಆಗಬೇಕು. ಆ ನಿಟ್ಟಿನಲ್ಲಿ ಎಲ್ಲರಿಗೂ ಸಲಹೆ, ಸೂಚನೆಗಳನ್ನು ಕೊಟ್ಟಿದ್ದೇನೆ ಎಂದು ತಿಳಿಸಿದರು.