ಚಿಕ್ಕೋಡಿ (ಬೆಳಗಾವಿ) : ಮೌಢ್ಯಕ್ಕೆ ಸೆಡ್ಡು ಹೊಡೆದು ರಾಜ್ಯ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರು ಮತ್ತೊಮ್ಮೆ ರಾಹುಕಾಲದಲ್ಲಿ ನಾಮಪತ್ರ ಸಲ್ಲಿಸಿ ಜನಜಾಗೃತಿ ಮೂಡಿಸಿದ್ದಾರೆ. ಮುಂಬರುವ ವಿಧಾನಸಭಾ ಚುನಾವಣೆಗೆ ಯಮಕನಮರಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದು ಅಮಾವಾಸ್ಯೆ ಹಾಗೂ ಸೂರ್ಯ ಗ್ರಹಣ ಜೊತೆಗೆ ರಾಹು ಕಾಲದಲ್ಲಿಯೇ ತಮ್ಮ ಪುತ್ರನೊಂದಿಗೆ ಆಗಮಿಸಿ ಸರಳವಾಗಿ ಹುಕ್ಕೇರಿ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಕೆ ಮಾಡಿದರು.
ಇದನ್ನೂ ಓದಿ :ಕ್ರಿಮಿನಲ್ಗಳ ಜೊತೆ ಶಾಮೀಲಾದವರನ್ನ ಕಾಂಗ್ರೆಸ್ ಸ್ಟಾರ್ ಪ್ರಚಾರಕ್ಕರನ್ನಾಗಿಸಿದೆ: ಶೋಭಾ ಕರಂದ್ಲಾಜೆ ಆರೋಪ
ನಾಮಪತ್ರ ಸಲ್ಲಿಸಿದ ಬಳಿಕ, ನೀವು ಮೌಢ್ಯ ವಿರೋಧ ಮಾಡಿದರೆ ಬಿಜೆಪಿಯವರು ನಿಮ್ಮನ್ನು ವಿರೋಧ ಮಾಡುತ್ತಿದ್ದಾರೆ ಎಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಸ್ವಾಭಾವಿಕ. ರಾಜಕೀಯ ವ್ಯವಸ್ಥೆಯಲ್ಲಿ ವಿರೋಧ ಮಾಡಲೇಬೇಕಾಗುತ್ತದೆ. ಅವರು ಬೇರೆಯವರಿಗೂ ವಿರೋಧ ಮಾಡುತ್ತಾರೆ. ನಮಗೊಬ್ಬರಿಗೆ ಮಾತ್ರ ಅಲ್ಲ. ಕರ್ನಾಟದಲ್ಲಿ ನಾನು ಟಾಪ್ ಟೆನ್‌ನಲ್ಲಿ ಆಯ್ಕೆ ಆಗುತ್ತೇನೆ" ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.